ಚಿತ್ರದುರ್ಗ-ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರಸ್ವಾಮಿ ರಥೋತ್ಸವ ಏಪ್ರಿಲ್ 30 ರ ಮಂಗಳವಾರ ಬೆಳಿಗ್ಗೆ 10 ಗಂಟೆಗ ವಿಜೃಂಭಣೆಯಿಂದ ನೆರವೇರಲಿದೆ.
ರಥೋತ್ಸವದ ಬಳಿಕ ಮಧ್ಯಾಹ್ನ 2 ಗಂಟೆಗೆ ಓಕಳಿ, ನಂತರ 3 ಗಂಟೆಗೆ ಸ್ವಾಮಿಯು ಗಂಗಾಪೂಜೆ ನೆರವೇರಿಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಮರಳಲಿದೆ.
ರಥೋತ್ಸವದ ಮುನ್ನಾ ದಿನವಾದ ಸೋಮವಾರ ಬೆಳಿಗ್ಗೆ 10 ಗಂಟೆಗೆ ರುದ್ರಾಭಿಷೇಕ, ಇಷ್ಟಲಿಂಗ ಮಹಾಪೂಜೆ 4 ಗಂಟೆಗೆ ಕೋಣಂದೂರು ಪುರ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪಾದಪೂಜೆ ಮತ್ತು ಆಶೀರ್ವಚನ ಇರುತ್ತದೆ. ಸಂಜೆ 7 ಗಂಟೆಗೆ ಗಣಾರಾಧನೆ, ಸಾಮೂಹಿಕ ದಾಸೋಹ ಸೇವೆ ಇರುತ್ತದೆ.