‘ನಾವೆಲ್ಲಾ ಒಟ್ಟಾಗಿ ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು’- ಕೇಜ್ರಿವಾಲ್

ದೆಹಲಿ: ನಾವೆಲ್ಲಾ ಒಟ್ಟಾಗಿ ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನಾನು ನನ್ನ ಎಲ್ಲಾ ಶಕ್ತಿಯಿಂದ ಹೋರಾಡುತ್ತೇನೆ, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆಂದು ಪ್ರಧಾನಿ ಹೇಳುತ್ತಾರೆ. ಆದರೆ ಬಿಜೆಪಿ ತಮ್ಮ ಪಕ್ಷದಲ್ಲಿರುವ ಎಲ್ಲಾ ಭ್ರಷ್ಟರನ್ನು ಸ್ವಾಗತಿಸಿದ್ದಾರೆ. ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಅರವಿಂದ್ ಕೇಜ್ರಿವಾಲ್ ಅವರಿಂದ ಕಲಿಯಿರಿ ಎಂದಿದ್ದಾರೆ.

ಪಕ್ಷ ವಿಭಜನೆಯಾಗುತ್ತದೆ ಎಂದು ಭಾವಿಸಿ ಬಿಜೆಪಿಯವರು ನಾಲ್ವರು ಎಎಪಿ ನಾಯಕರನ್ನು ಜೈಲಿಗೆ ಕಳುಹಿಸಿದ್ದಾರೆ. ಎಎಪಿ ಒಂದು ಪಕ್ಷವಲ್ಲ, ಇದು ಒಂದು ಚಿಂತನೆ. ಅವರು ನಮ್ಮ ಪಕ್ಷವನ್ನು ಮುಗಿಸಲು ಬಯಸಿದ್ದರೆ ಇನ್ನು ಹೆಚ್ಚು ವಿಸ್ತರಿಸುತ್ತದೆ. ಪ್ರಧಾನಿಯವರು ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲು ಪ್ರಧಾನಿ ಬಯಸುತ್ತಿದ್ದಾರೆ. “ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದರೆ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಪಿಣರಾಯಿ ವಿಜಯನ್ ಮತ್ತು ಇತರ ಹಲವಾರು ವಿರೋಧ ಪಕ್ಷದ ನಾಯಕರು ಜೈಲು ಪಾಲಾಗುತ್ತಾರೆ ಎಂದು ಹೇಳಿದರು.

Advertisement

ನಾನು ಬಿಜೆಪಿಯವರಲ್ಲಿ ಕೇಳುತ್ತೇನೆ, ನಿಮ್ಮ ಪ್ರಧಾನಿ ಯಾರು? ಅವರು ಮುಂದಿನ ಸೆಪ್ಟೆಂಬರ್‌ನಲ್ಲಿ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. 75 ವರ್ಷ ವಯಸ್ಸಿನವರು ನಿವೃತ್ತಿ ಹೊಂದಬೇಕು ಎಂಬ ನಿಯಮವನ್ನು ಅವರೇ ಮಾಡಿದ್ದಾರೆ. ಅವರು ಮುಂದಿನ ವರ್ಷ ನಿವೃತ್ತರಾಗಬೇಕು. ನಾನು ಬಿಜೆಪಿಯನ್ನು ಕೇಳುತ್ತೇನೆ. ನಿಮ್ಮ ಪ್ರಧಾನಿ ಆಯ್ಕೆ ಯಾವುದು? ಎಂದು ಅವರು ಪ್ರಶ್ನಿಸಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement