ಅಮೇರಿಕಾ: ಜಪಾನ್ ದೇಶದ ಸಮರ ಕಲೆಗಳಲ್ಲಿ ನಿಂಜುತ್ಸು ಒಂದು. ಅದರಲ್ಲಿ ಪರಿಣತಿ ಪಡೆದವರನ್ನು ನಿಂಜಾ ಎನ್ನುತ್ತಾರೆ. ನಿಂಜುತ್ಸು ಎಂಬ ಸಮರಕಲೆಯನ್ನು ಕಲಿಯುವುದು ಅಷ್ಟೂ ಸುಲಭದ ಮಾತಲ್ಲ. ಅಪಾರ ಶ್ರಮ, ದೇಹದಂಡನೆ, ಮತ್ತು ಏಕಾಗ್ರತೆ ಯಲ್ಲಿ ಈ ಕಲೆಯನ್ನು ಕಲಿಯಬೇಕಾಗುತ್ತದೆ. ಜಪಾನ್, ಚೈನಾ ದೇಶಗಳಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ನಿಂಜುತ್ಸು ಸಮರ ಕಲೆಯನ್ನು ಕಲಿಸುತ್ತಾರೆ. ಆದರೆ ಅಮೆರಿಕಾದ ವರ್ಜಿನಿಯಾ ಲಿನೋರ್ ಮ್ಯಾಕ್ಕೊಲ್ ಅವರು 71 ನೆ ಇಳಿ ವಯಸ್ಸಿನಲ್ಲಿ ಹಿರಿಯ ಮಹಿಳಾ ನಿಂಜಾ ಎಂಬ ಬಳುವಳಿ ಪಡೆದುಕೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
ಕಲಿಯುವ ಆಸಕ್ತಿ ಶ್ರದ್ದೆ ಇದ್ದರೆ ವಯಸ್ಸು ಅನ್ನುವುದು ಲೆಕ್ಕಿಲ್ಲ ಎಂಬುದನ್ನ ನಿಜ ಮಾಡಿ ಈ ಮಹಿಳೆ ತೋರಿಸಿದ್ದಾರೆ.ಗಿನ್ನೀಸ್ ಸಂಸ್ಥೆಯು ಬಿಡುಗಡೆ ಮಾಡಿರುವ ವರ್ಜಿನಿಯಾ ವಿಡಿಯೋದಲ್ಲಿ ಅವರು ತಮ್ಮ ದಾರಿಯಲ್ಲಿ ಎದುರಾಗುವ ವಿವಿಧ ಬಗೆಯ ತಡೆಗಳನ್ನು ಸಲೀಸಾಗಿ ನಿವಾರಿಸುವುದನ್ನು ಕಾಣಬಹುದು. ಅವರು ಮೇಲೇರುವುದು, ಎತ್ತರದಿಂದ ಹಾರುವುದು, ಸರಳುಗಳಿಂದ ಜೋತಾಡುವ ಸಾಹಸಗಳನ್ನು ನೋಡುವಾಗ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ.
ಸುಮಾರು 66ನೇ ವಯಸ್ಸಿನಿಂದ ಸ್ಪರ್ಧೆಗಳಲ್ಲಿ ತೊಡಗಿದ ಅವರು 7೦ ವರ್ಷ 90 ದಿನಗಳಿದ್ದಾಗ ಸ್ಪರ್ಧಿಸಿ ಅತ್ಯಂತ ಹಿರಿಯ ನಿಂಜಾ ಪಟುವಾಗಿ ಹೊಮ್ಮಿದ್ದಾರೆ. ಎಂದು ಗಿನ್ನಿಸ್ ಸಂಸ್ಥೆಯು ಘೋಷಿಸಿದೆ.ನಿಂಜುತ್ಸು ಕಲಿತುಕೊಂಡು ಸ್ಪರ್ಧಿಸುವಂತೆ ಸ್ಫೂರ್ತಿಯಾಗಿ ನಿಂತವರು ಅವರ ಮಗಳು. ನನ್ನ ಗಂಡ ನನ್ನ ನಂಬರ್ ಒನ್ ಅಭಿಮಾನಿ ಎಂದೂ ಅವರು ಹೇಳಿಕೊಂಡಿದ್ದಾರೆ.
71ನೇ ವಯಸ್ಸಿನಲ್ಲೂ ಈ ಉತ್ಸಾಹ ಮತ್ತು ಬದ್ಧತೆ ಅನೇಕರಿಗೆ ಮಾದರಿ ಎಂದು ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.