ನಿಂಬೂ ಶರಬತ್‌ನಿಂದ ಆರೋಗ್ಯಕ್ಕೆ 7 ಲಾಭ

ನಿಮ್ಮ ದಿನಚರಿ ಲೆಮನ್ ವಾಟರ್‌ನಿಂದ ಪ್ರಾರಂಭವಾಗುತ್ತಿದೆಯೇ? ಇಲ್ಲ ಅಂದರೆ ಇಂದಿನಿಂದಲೇ ಪ್ರಾರಂಭಿಸಿ. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಅರ್ಧ ಚಮಚ ನಿಂಬೆರಸ ಸೇರಿಸಿದರೆ ಆ ನೀರು ಅದ್ಭುತವಾದ ಔಷಧೀಯ ಗುಣವನ್ನು ಪಡೆದುಕೊಂಡು ನಿಮ್ಮ ದೇಹದ ಮೇಲೆ ಈ ರೀತಿಯ ಪರಿಣಾಮ ಬೀರುತ್ತದೆ ಜೀರ್ಣಕ್ರಿಯೆಗೆ ಸಹಕಾರಿ: ಖಾಲಿ ಹೊಟ್ಟೆಯಲ್ಲಿ ನಿಂಬು ಪಾನೀಯ ತೆಗೆದುಕೊಳ್ಳುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಎದೆ ಉರಿ ಸಮಸ್ಯೆ ಕಡಿಮೆಯಾಗುವುದು. ಲಿವರ್ ಆರೋಗ್ಯಕ್ಕೆ: ಇದರಲ್ಲಿರುವ ಸಿಟ್ರಿಕ್ ಆಸಿಡ್ ಲಿವರ್‌ನಲ್ಲಿರುವ ಕಲ್ಮಶವನ್ನು ತೆಗದು ಹಾಕಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ pH ಸಮತೋಲನಕ್ಕೆ: ನಮ್ಮ ದೇಹದಲ್ಲಿ ಅಸಿಡಿಟಿ ಸಮಸ್ಯೆ ಬರದಂತೆ ತಡೆಯುವಲ್ಲಿ ನಿಂಬು ಪಾನೀಯ ಸಹಾಯ ಮಾಡುತ್ತದೆ. ನಾನ್‌ವೆಜ್‌ ಆಹಾರ ಸೇವನೆ ಮಾಡಿದ ಬಳಿಕ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವುದರಿಂದ ರಕ್ತದಲ್ಲಿ pH ಸಮತೋಲನದಲ್ಲಿಡಬಹುದು. ಅಲ್ಲದೆ ಈ ವಿಧಾನ ಉರಿಮೂತ್ರ ಸಮಸ್ಯೆಗೂ ಒಂದು ಉತ್ತಮ ಪರಿಹಾರ. ರೋಗ ನಿರೋಧಕ ಶಕ್ತಿ ಹೆಚ್ಚುವುದು: ಶೀತದ ವಿರುದ್ಧ ಹೋರಾಡುವಲ್ಲಿ ಸಿಟ್ರಸ್ ಅಂಶವಿರುವ ಆಹಾರಗಳು ತುಂಬಾ ಪರಿಣಾಮಕಾರಿ. ಈ ಪಾನೀಯದಲ್ಲಿ ಸಿಟ್ರಸ್‌ ಅಂಶ ಹೆಚ್ಚಾಗಿ ಇರುವುದರಿಂದ ನೆಗಡಿ-ಶೀತ ಇವುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ತುಂಬುತ್ತದೆ. ತ್ವಚೆ ಆರೈಕೆ: ತ್ವಚೆ ಸೌಂದರ್ಯಕ್ಕೆ ಬರೀ ಬಾಹ್ಯ ಆರೈಕೆ ಮಾತ್ರವಲ್ಲ, ಆಹಾರಕ್ರಮದಲ್ಲಿ ನಿಗಾವಹಿಸಬೇಕು. ಈ ಪಾನೀಯ ರಕ್ತವನ್ನು ಶುದ್ಧೀಕರಿಸುವುದರಿಂದ ತ್ವಚೆ ಕಾಂತಿ ಹೆಚ್ಚುವುದು. ಕೊಬ್ಬು ಕರಗಿಸಲು: ಕೊಬ್ಬನ್ನು ಕರಗಿಸುವಲ್ಲಿ ಈ ಪಾನೀಯ ತುಂಬಾ ಸಹಾಯಕಾರಿ. ಬಾಯಿ ದುರ್ಗಂಧ ತಡೆಯುತ್ತದೆ: ಈ ಜ್ಯೂಸ್ ಕುಡಿಯುವುದರಿಂದ ಬಾಯಿ ದುರ್ಗಂಧವನ್ನು ತಡೆಯಬಹುದು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement