ನಿಂಬೆಹಣ್ಣಿನ ಈ ಟ್ರಿಕ್ಸ್ ಗೊತ್ತಾ..? ಹೀಗೆ ಮಾಡಿದ್ರೆ ಡಯಾಬಿಟೀಸ್ ಕಂಟ್ರೋಲ್‌ಗೆ ಬರುತ್ತೆ..!

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಕೊರೋನಾ ಕಾಲದ ಮಾತು. ಸಕ್ಕರೆ ಕಾಯಿಲೆ ಕೂಡ ಮೈನ್ಟೈನ್ ಆಗುತ್ತದೆ ಎನ್ನುವುದು ಇತ್ತೀಚೆಗೆ ಬಂದ ಸುದ್ದಿ!

ಬೇಸಿಗೆಕಾಲ ಬಂದರೆ ನಮಗೆ ಪಟ್ ಅಂತ ನೆನಪಾಗುವುದು ತಂಪಾದ ಒಂದು ಲೋಟ ನಿಂಬೆಹಣ್ಣಿನ ಜ್ಯೂಸು. ನಿಂಬೆಹಣ್ಣಿನ ಜ್ಯೂಸ್ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಕುಡಿಯಬೇಕು ಎನ್ನುವ ನಿಯಮವೇನಿಲ್ಲ. ಯಾವಾಗ ಬೇಕಾದರೂ ಕುಡಿಯಬಹುದು.

ಅದರಲ್ಲೂ ಸಕ್ಕರೆ ಕಾಯಿಲೆ ಇರುವವರು ಕುಡಿಯಲೇಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಸಿಹಿ ಹಾಕದೆ ಕುಡಿಯುವ ನಿಂಬೆಹಣ್ಣಿನ ರಸ ಅಥವಾ ಸಾರ ದೇಹದಲ್ಲಿ ಬ್ಲಡ್ ಶುಗರ್ ಮಟ್ಟವನ್ನು ನಿರ್ವಹಣೆ ಮಾಡುತ್ತದಂತೆ! ನಿಮ್ಮ ಮನೆಯಲ್ಲಿ ಯಾರಾದರೂ ಸಕ್ಕರೆ ಕಾಯಿಲೆ ಇರುವವರು ಇದ್ದರೆ, ಒಮ್ಮೆ ಈ ಕೆಳಗಿನಂತೆ ಟ್ರೈ ಮಾಡಿ.

Advertisement

ನಿಂಬೆಹಣ್ಣಿಗೂ ಮಧುಮೇಹಕ್ಕು ಏನು ಸಂಬಂಧ?

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಪಾರವಾಗಿದೆ. ನಾರಿನ ಅಂಶ, ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿದ್ದು, ಕಡಿಮೆ ಸಿಹಿ ಸೂಚ್ಯಂಕವನ್ನು ಹೊಂದಿದೆ.

ಆಂಟಿ ಇಂಪ್ಲಮೇಟರಿ ಆಗಿರುವ ನಿಂಬೆಹಣ್ಣು ದೇಹದ ಬ್ಲಡ್ ಶುಗರ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನಿಂಬೆಹಣ್ಣಿನಲ್ಲಿ ಇರುವಂತಹ ಪೌಷ್ಟಿಕ ಸತ್ವಗಳು ಮೆಟಬಾಲಿಸಂ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುತ್ತವೆ. ಎಂದು ಪೌಷ್ಟಿಕತಜ್ಞ ಮತ್ತು ಹೋಮಿಯೋಪತಿ ಸಲಹೆಗಾರ ರಾಗಿರುವ ಡಾ ಸ್ಮಿತಾ ಭೋರ್ ಪಾಟೀಲ್ ಅವರು ಹೇಳುತ್ತಾರೆ.

ನಿಂಬೆಹಣ್ಣಿನಲ್ಲಿ ಸಿಗುವ ವಿಟಮಿನ್ ಸಿ ಪ್ರಮಾಣ…

ನಿಂಬೆಹಣ್ಣಿನಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆ ಇದೆ. ಆದ್ದರಿಂದ ಇದು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

ವಿಟಮಿನ್ ಸಿ ಇರುವ ಕಾರಣದಿಂದ ದೇಹದ ಇನ್ಸುಲಿನ್ ಮಟ್ಟವನ್ನು ಇದು ಉತ್ತಮವಾಗಿ ನಿರ್ವ ಹಣೆ ಮಾಡುತ್ತದೆ. ನಾರಿನ ಅಂಶ ಅಪಾರವಾಗಿರುವ ನಿಂಬೆಹಣ್ಣು ಜೀರ್ಣಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಆಗದಂತೆ ನೋಡಿಕೊಳ್ಳುತ್ತದೆ.

ಹಾಗಾದ್ರೆ ನಿಂಬೆ ಹೇಗೆ ಬಳಕೆ ಮಾಡಬೇಕು?

ನಿಂಬೆ ಹಣ್ಣನ್ನು ಈ ರೀತಿ ಬಳಸಿದರೆ ಬ್ಲಡ್ ಶುಗರ್ ಉತ್ತಮವಾಗಿ ನಿರ್ವಹಣೆಯಾಗುತ್ತದೆ. ತಾಜಾ ನಿಂಬೆಹಣ್ಣಿನ ರಸವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು.

ಅಂದರೆ ನೀವು ಊಟ ಮಾಡುವಾಗ, ತಿಂಡಿ ತಿನ್ನುವಾಗ ಸ್ವಲ್ಪ ನಿಂಬೆರಸ ಹಿಂಡಿ ಸೇವನೆ ಮಾಡು ವುದು ಅವಶ್ಯಕವಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ನಿಮ್ಮ ನಾಲಿಗೆಯ ಸಾಮರ್ಥ್ಯವನ್ನು ಸಹ ಹೆಚ್ಚು ಮಾಡುತ್ತದೆ. ಸಲಾಡ್ ಹಾಗೂ ಇನ್ನಿತರ ಆಹಾರ ಪದಾರ್ಥಗಳಲ್ಲಿ ನಿಂಬೆ ಹಣ್ಣಿನ ರಸವನ್ನು ಸೇರಿಸಿ.

ಖಾಲಿ ಹೊಟ್ಟೆಗೆ

ಇನ್ನೊಂದು ಟ್ರಿಕ್ ಎಂದರೆ ನೀವು ಖಾಲಿ ಹೊಟ್ಟೆಯಲ್ಲಿ ನಿಂಬೆಹಣ್ಣಿನ ರಸ ಕುಡಿಯ ಬಹುದು. ಸುಲಭವಾಗಿ ಇದನ್ನು ನೀವು ತಯಾರು ಮಾಡಬಹುದು.

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಅದಕ್ಕೆ ಯಾವುದೇ ಸಕ್ಕರೆ ಅಥವಾ ಸಿಹಿ ಹಾಕದೆ ಹಾಗೆ ಕುಡಿಯಬೇಕು. ಇದು ಸಹ ನಿಮ್ಮ ಬ್ಲಡ್ ಶುಗರ್ ಮಟ್ಟವನ್ನು ನಿರ್ವಹಣೆ ಮಾಡುತ್ತದೆ.

ನೀವು ಕುಡಿಯಲು ಇಟ್ಟುಕೊಂಡಿರುವ ನೀರಿನ ಬಾಟಲ್ ನಲ್ಲಿ ನಿಂಬೆಹಣ್ಣಿನ ಸಣ್ಣ ಸಣ್ಣ ಚೂರು ಗಳನ್ನು ಹಾಕಿ. ಆಗಾಗ ಇದನ್ನು ಕುಡಿಯುವುದರಿಂದ ನಿಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗುತ್ತವೆ. ನಿಮ್ಮ ಮಾನಸಿಕ ಒತ್ತಡ ಕೂಡ ಸಾಕಷ್ಟು ಕಡಿಮೆಯಾಗುತ್ತದೆ. ನಿಮ್ಮಹೃದಯ ಯಾವಾಗಲೂ ಆರೋಗ್ಯದಿಂದ ಕೂಡಿರುತ್ತದೆ. ಇದರಿಂದಲೂ ಸಹ ಮಧುಮೇಹ ನಿರ್ವಹಣೆ ಆಗುತ್ತದೆ.

ಸಲಾಡ್ ಅಥವಾ ಸೂಪ್ ನಲ್ಲಿ

ಸಲಾಡ್ ಅಥವಾ ಸೂಪ್ ನಲ್ಲಿ ಆರೋಗ್ಯಕರವಾಗಿ ನಿಂಬೆಹಣ್ಣಿನ ರಸ ಸೇರಿಸಿ ಸೇವನೆ ಮಾಡಬಹುದು. ಇದು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ನಿಮ್ಮ ದೇಹದಲ್ಲಿ ಪಿಎಚ್ ಮಟ್ಟವನ್ನು ಸಮತೋಲನ ಮಾಡುತ್ತದೆ. ಆದರೆ ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಿ.

ಸ್ಟಾರ್ಚ್ ಇರುವ ಆಹಾರಗಳಲ್ಲಿ

ಸ್ಟಾರ್ಚ್ ಇರುವ ಆಹಾರಗಳಲ್ಲಿ ನಿಂಬೆಹಣ್ಣಿನ ರಸ ಬಳಕೆ ಮಾಡಬೇಕು. ಅಂದರೆ ಅನ್ನ, ಆಲೂಗಡ್ಡೆ, ಬಿಟ್ರೋಟ್, ಮುಸುಕಿನ ಜೋಳ ಇತ್ಯಾದಿ.

ಇವುಗಳನ್ನು ತಿನ್ನುವಾಗ ಜೊತೆಗೆ ನಿಂಬೆಹಣ್ಣಿನ ರಸ ಇದ್ದರೆ ನಿಮ್ಮ ದೇಹದಲ್ಲಿ ಉರಿಯುತ ಹೆಚ್ಚಾಗು ವುದಿಲ್ಲ ಮತ್ತು ಆರೋಗ್ಯ ಕೂಡ ಚೆನ್ನಾಗಿ ನಿರ್ವಹಣೆ ಆಗುತ್ತದೆ. ಕೆಲವರು ಚಿಕನ್ ಮಾಡುವಾಗ ಕೂಡ ನಿಂಬೆಹಣ್ಣಿನ ರಸ ಬಳಸುತ್ತಾರೆ. ಇದು ಕೂಡ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement