ಪಾಟ್ನಾ: 2024ರ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಪಕ್ಷದ ಯುವ ನಾಯಕ ಬರ್ಬರ ಹತ್ಯೆಯಾಗಿದೆ.
ಪಾಟ್ನಾದ ಪನ್‌ಪುನ್‌ನಲ್ಲಿ ಜೆಡಿಯು ನಾಯಕ ಸೌರಭ್ ಕುಮಾರ್ (33) ಅವರನ್ನು ನಿನ್ನೆ (ಬುಧವಾರ) ರಾತ್ರಿ ಬೈಕ್‌ನಲ್ಲಿ ಬಂದ ನಾಲ್ವರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸೌರಭ್ ಜೆಡಿಯು ಪಕ್ಷದ ಸರ್ವಾಂಗೀಣ ನಾಯಕರಾಗಿದ್ದರು.
ಸೌರಭ್ ಅವರು ಬುಧವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಸೌರಭ್ ಅವರ ಜೊತೆಗಿದ್ದ ಮುನ್ಮುಮ್ ಕುಮಾರ್ ಎಂಬುವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.