ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್ ಕರೆ ಮಾಡಿ ಹಣ ದೋಚುವವರ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಚಮ್ಸ್ ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.
ಇಂತಹ ಕೃತ್ಯಗಳ ಬಗ್ಗೆ ಸುದ್ದಿ ತಾಣಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳು ಪ್ರಕಟವಾಗುತ್ತಿವೆ. ಸಾರ್ವಜನಿಕರು ಕಷ್ಟಪಟ್ಟು ಗಳಿಸಿದ ಹಣವನ್ನು ಲಪಟಾಯಿತ್ತಿದ್ದಾರೆ ಎಂದು ಸಿಬಿಐಸಿ ಹೇಳಿದೆ.
ಈ ಕೃತ್ಯ ಎಸಗಲು ವಂಚಕರು ಮೊಬೈಲ್ ಕರೆ ಅಥವಾ ಸಂದೇಶವನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.