ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಆಗಾಗ ಎಚ್ಚರ ಆಗುತ್ತಿದೆಯೇ?

ರಾತ್ರಿ ಯಾವುದಾದರೂ ಸಮಯದಲ್ಲಿ ನಿಮಗೆ ಎಚ್ಚರವಾಗಿ ನಿದ್ರೆ ಬರದೆ ಇದ್ದರೆ ಆಗ ಇದಕ್ಕೆ ಕೆಲವೊಂದು ಕಾರಣಗಳು ಇರಬಹುದು.

ನಿದ್ರಾಹೀನತೆ ಮತ್ತು ಪದೇ ಪದೇ ನಿದ್ರೆಯಿಂದ ಎಚ್ಚರವಾಗುವಂತಹ ಸಮಸ್ಯೆಯು ಜನರನ್ನು ಕಾಡುತ್ತಲಿರುವುದು. ನಿದ್ರಾಹೀನತೆ ಎಂದರೆ ರಾತ್ರಿಯಿಡಿ ಸರಿಯಾಗಿ ನಿದ್ರೆ ಬರದೇ ಇರುವುದು ಮತ್ತು ನಿದ್ರೆಯಲ್ಲಿ ಮಧ್ಯೆ ಮಧ್ಯೆ ಎಚ್ಚರವಾದರೆ ಅದಕ್ಕೆ ಕೂಡ ಕಾರಣಗಳು ಇರುವುದು.

ರಾತ್ರಿ ಮೂರು ಗಂಟೆಗೆ ನಿಮಗೆ ಹಠಾತ್ ಆಗಿ ಎಚ್ಚರವಾದರೆ ಆಗ ಇದಕ್ಕೆ ಕಾರಣವೇನು ಎಂದು ನೀವು ಭಾವಿಸುತ್ತಿರಬಹುದು. ಮಾನಸಿಕವಾಗಿಯೂ ಇದಕ್ಕೆ ಉತ್ತರವನ್ನು ಹುಡುಕಲು ಜನರು ಪ್ರಯತ್ನಿಸುತ್ತಿರಬಹುದು.

Advertisement

ರಾತ್ರಿ ಮೂರು ಗಂಟೆಗೆ ಪ್ರತಿನಿತ್ಯವೂ ಎಚ್ಚರವಾದರೆ ಅದು ತುಂಬಾ ಕೆಟ್ಟದು ಎಂದು ಹೆಚ್ಚಿನವರು ಭಾವಿಸುವರು. ಯಾಕೆಂದರೆ ಈ ಸಮಯದಲ್ಲಿ ಭೂತಗಳ ಬಾಧೆಯು ಹೆಚ್ಚಾಗಿರುವುದು. ಇದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದಲ್ಲವಾದರೂ ಜನರಲ್ಲಿ ನಿದ್ರೆ ಮತ್ತು ನಿದ್ರಾಹೀನತೆಗೆ ವಿವಿಧ ಹವ್ಯಾಸಗಳು ಇವೆ.

ಕೆಲವು ಜನರು ರಾತ್ರಿ ಬೇಗ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರುವರು ಮತ್ತು ಇನ್ನು ಕೆಲವು ಜನರು ತಡರಾತ್ರಿ ತನಕ ನಿದ್ರೆ ಮಾಡುವುದೇ ಇಲ್ಲ. ಇದರ ಹೊರತಾಗಿ ಕೆಲವು ಜನರಿಗೆ ರಾತ್ರಿ ವೇಳ ಹಠಾತ್ ಆಗಿ ಎಚ್ಚರವಾಗುವುದು.

ಮುಂಜಾನೆ 3 ಗಂಟೆಯಿಂದ 5 ಗಂಟೆ ತನಕ ಕೆಲವರಿಗೆ ನಿದ್ರೆಯಿಂದ ಎಚ್ಚರವಾಗುವುದು. ಕೆಲವರಿಗೆ ಇದು ತುಂಬಾ ವಿಚಿತ್ರವೆಂದು ಅನಿಸಿದರೂ ಅವರಿಗೆ ಪ್ರತಿನಿತ್ಯವೂ ಎಚ್ಚರವಾಗುವುದು. ಇದಕ್ಕೆ ಯಾವುದೇ ಅಲರಾಂ ಕೂಡ ಬೇಕಾಗಿಲ್ಲ. ನಿದ್ರಾಹೀನತೆಯ ಸಮಸ್ಯೆಯಾಗಿರುವ ಈ ಬಗ್ಗೆ ಗಮನಹರಿಸಬೇಕಾಗಿದೆ.

ರಾತ್ರಿ 9ರಿಂದ 11ರ ತನಕ ನಿದ್ರೆ ಬರದೇ ಇರುವುದು

ರಾತ್ರಿ ನೀವು 9 ಗಂಟೆಗೆ ಮಲಗಿ ನಿದ್ರೆ ಬರಬೇಕೆಂದು ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲವೇ? ಹಾಗಾದರೆ ನೀವು ಯಾವುದೇ ವಿಚಾರವಾಗಿ ಅತಿಯಾಗಿ ಚಿಂತಿಸುತ್ತಿದ್ದೀರಿ ಅಥವಾ ಯಾವುದೋ ವಿಷಯದ ಬಗ್ಗೆ ಚಿಂತೆಗೆ ಒಳಗಾಗಿದ್ದೀರಿ ಎಂದು ಹೇಳಬಹುದು.

ಇಂತಹ ಸಮಸ್ಯೆಯು ನಿಮಗೆ ಕಾಡುತ್ತಲಿದ್ದರೆ ಆಗ ನಿಮಗೆ ಆಧ್ಯಾತ್ಮಿಕ ಆಲೋಚನೆ ಬೇಕಾಗಿದೆ. ಹೀಗೆ ಆಗುತ್ತಲಿದ್ದರೆ ಆಗ ನೀವು ಧ್ಯಾನ ಮತ್ತು ಧನಾತ್ಮಕವಾದ ಮಂತ್ರಗಳನ್ನು ಪಠಿಸಬೇಕು. ಇದರಿಂದ ಒತ್ತಡವು ಕಡಿಮೆ ಆಗುವುದು ಮತ್ತು ಒಳ್ಳೆಯ ನಿದ್ರೆ ಬರುವುದು.

ರಾತ್ರಿ 11 ರಿಂದ 1 ಗಂಟೆ ತನಕ ನಿದ್ರಾಹೀನತೆ

ರಾತ್ರಿ 11 ಗಂಟೆಯಿಂದ 1 ಗಂಟೆ ತನಕ ನೀವು ಹಠಾತ್ ಆಗಿ ಎಚ್ಚರವಾದರೆ ಆಗ ನೀವು ಯಾವುದೋ ರೀತಿಯ ಭಾವನಾತ್ಮಕವಾದ ವಿಷಯದ ಕುರಿತು ಚಿಂತೆ ಮಾಡುತ್ತಲಿದ್ದೀರಿ ಎಂದು ಹೇಳಬಹುದು.

ಇದರ ಹೊರತಾಗಿ ನಿಮ್ಮ ಮನಸ್ಸು ಚಂಚಲವಾಗಿದ್ದರೆ ಆಗ ಇದು ಪಿತ್ತಕೋಶದ ಸಮಸ್ಯೆಗೆ ಕಾರಣವಾಗಬಹುದು. ಇಂತಹ ಸಮಸ್ಯೆಯು ಇದ್ದರೆ ಆಗ ನೀವು ಧನಾತ್ಮಕವಾಗಿ ಆಲೋಚನೆ ಮಾಡಬೇಕು ಮತ್ತು ಒಳ್ಳೆಯ ಆಲೋಚನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ರಾತ್ರಿ 1ರಿಂದ 3 ಗಂಟೆ ತನಕ ನಿದ್ರಾಹೀನತೆ

ರಾತ್ರಿ 1 ಗಂಟೆಯಿಂದ 3 ಗಂಟೆ ತನಕ ನಿಮಗೆ ಎಚ್ಚರವಾದರೆ ಆಗ ಇದು ವ್ಯಕ್ತಿಯಲ್ಲಿನ ಕೋಪವನ್ನು ಸೂಚಿಸುವುದು. ಆದಾಗ್ಯೂ, ಇದು ತಾತ್ಕಾಲಿಕ ಭಾವನೆಯಾಗಿದೆ ಮತ್ತು ಇದು ಬಳಿಕ ಸಾಮಾನ್ಯವಾಗುವುದು.

ಇಂತಹ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಆಗ ಇದು ನಿಮ್ಮ ಯಕೃತ್(ಲಿವರ್) ಮೇಲೆ ಪರಿಣಾಮ ಬೀರಬಹುದು. ಇಂತಹ ಸಮಸ್ಯೆ ಬಗೆಹರಿಸಿಕೊಳ್ಳಲು ನೀವು ಕೆಲವೊಂದು ಕ್ರಮಗಳನ್ನು ಮಲಗುವ ಮೊದಲು ತೆಗೆದುಕೊಳ್ಳಬೇಕು.

ಮಲಗುವ ಮೊದಲು ಕೈ ಹಾಗೂ ಕಾಲುಗಳನ್ನು ತೊಳೆಯಿರಿ ಮತ್ತು ಸ್ವಲ್ಪ ಧ್ಯಾನ ಮಾಡಿ. ಇದನ್ನು ನೀವು ನಿಯಮಿತವಾಗಿ ಮಾಡಿದರೆ ಧನಾತ್ಮಕ ಫಲಿತಾಂಶವು ಸಿಗುವುದು.

ಮುಂಜಾನೆ 3 ಗಂಟೆಯಿಂದ 5 ಗಂಟೆ ತನಕ ಎಚ್ಚರವಾದರೆ.

ನಿಮಗೆ ಮುಂಜಾನೆ 3 ಗಂಟೆಯಿಂದ 5 ಗಂಟೆ ತನಕ ಎಚ್ಚರವಾದರೆ ಆಗ ನೀವು ಆಧ್ಯಾತ್ಮಿಕ ಶಕ್ತಿಗೆ ಸಂಪರ್ಕದಲ್ಲಿದ್ದೀರಿ ಎಂದು ಹೇಳಬಹುದು.

ನಿಮ್ಮ ಆತ್ಮವು ದೈವಿ ಶಕ್ತಿ ಪಡೆಯುವುದು ಮತ್ತು ನಿಮ್ಮಲ್ಲಿ ಕೆಲವು ಅಸಾಮಾನ್ಯ ಬದಲಾವಣೆಗಳು ಆಗುವುದು. ಈ ಸಮಯದಲ್ಲಿ ನಿದ್ರೆಯಿಂದ ಎಚ್ಚರವಾದರೆ ಆಗ ಕುಂಡಲಿನಿ ಚಕ್ರವು ಜಾಗ್ರತವಾಗುತ್ತದೆ ಎಂದು ಕೆಲವರು ಹೇಳುವರು.

ಮುಂಜಾನೆ 5 ರಿಂದ 7ರ ಮಧ್ಯೆ ನಿಮಗೆ ಎಚ್ಚರವಾದರೆ

ನಿಮಗೆ ಮುಂಜಾನೆ 5ರಿಂದ 7 ಗಂಟೆ ಮಧ್ಯೆ ನಿದ್ರೆಯಿಂದ ಎಚ್ಚರವಾದರೆ ಆಗ ನಿಮ್ಮನ್ನು ಭಾವನಾತ್ಮಕವಾಗಿ ಏನೋ ತಡೆಯುತ್ತಲಿದೆ ಎಂದು ಹೇಳಬಹುದು.

ನಿಮ್ಮ ದೇಹದಲ್ಲಿನ ಶಕ್ತಿಯ ಹರಿವಿಗೆ ಇದು ಪರಿಣಾಮ ಬೀರಬಹುದು ಮತ್ತು ಸರಿಯಾಗಿ ನಿದ್ರೆ ಮಾಡಲು ತೊಂದರೆ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹದ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನೀವು ಅರಿಯಬೇಕು. ಇದಕ್ಕಾಗಿ ನೀವು ಧ್ಯಾನ ಮಾಡುತ್ತಲಿರಬೇಕು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement