ಚಿನ್ನದ ಬಗ್ಗೆ ಇರುವ ಆಸೆ ಮತ್ತು ಆಸಕ್ತಿ ಒಂದು ಕಡೆಯಾದರೆ, ಇದನ್ನು ಇನ್ವೆಸ್ಟ್ಮೆಂಟ್ ರೀತಿಯಲ್ಲಿ ಹೂಡಿಕೆ ಮಾಡುವವರು ಇನ್ನೊಂದು ಕಡೆ. ಕಷ್ಟಕಾಲದಲ್ಲಿ ಚಿನ್ನ ಇದ್ದರೆ ಸಹಾಯ ಆಗುತ್ತದೆ ಎನ್ನುವ ಯೋಚನೆ ಇಂದೇ ಹಲವಾರು ಜನರು ಚಿನ್ನ ಖರೀದಿ ಮಾಡುತ್ತಾರೆ.
ಮತ್ತೊಂದು ಕಡೆ ಚಿನ್ನ ಖರೀದಿಯ ಬಗ್ಗೆ ಜನರಲ್ಲಿ ಭಯ ಕೂಡ ಇದೆ. ಅದಕ್ಕೆ ಕಾರಣ ಚಿನ್ನದ ಬೆಲೆ (Gold Price) ದಿನದಿಂದ ಗಗನಕ್ಕೆ ಮುಟ್ಟುತ್ತಿದೆ ಎನ್ನುವುದರ ಜೊತೆಗೆ, ಕಳ್ಳತನದ ಭಯ ಕೂಡ ಇದೆ. ಅಕಸ್ಮಾತ್ ಯಾರಾದರೂ ಚಿನ್ನ ಖರೀದಿ ಮಾಡಿದರೆ ಎನ್ನುವ ಭಯ ಕೂಡ ಇರುತ್ತದೆ. ಅದರ ಜೊತೆಗೆ ಈಗ ಪ್ರಕೃತಿ ವಿಕೋಪ ಬಂದು, ಮನೆಯಲ್ಲಿರುವ ಚಿನ್ನವೆಲ್ಲಾ ನಾಶವಾದರೆ ಎನ್ನುವ ಭಯ ಕೂಡ ಜನರಲ್ಲಿದ್ದು, ಒಂದು ವೇಳೆ ಈ ರೀತಿ ನಿಮ್ಮ ಚಿನ್ನದ ಆಭರಣಗಳು ಕಳ್ಳತನವಾದರೆ, ಅಥವಾ ಪ್ರಕೃತಿ ವಿಕೋಪದಲ್ಲಿ ಹಾನಿಯಾದರೆ ಏನು ಮಾಡಬೇಕು? ನಿಮ್ಮ ಚಿನ್ನವನ್ನು ವಾಪಸ್ ಪಡೆಯುವುದಕ್ಕೆ ಕೆಲವು ಮಾರ್ಗಗಳಿವೆ. ಅವುಗಳ ಬಗ್ಗೆ ಇಂದು ತಿಳಿಯೋಣ.
ಒಂದು ವೇಳೆ ನೀವು ಚಿನ್ನ ಕಳುವಾಗಿ ಬಿಡುತ್ತದೆ ಎನ್ನುವ ಭಯ ಹೊಂದಿದ್ದರೆ, ನಿಮ್ಮ ಹತ್ತಿರುವ ಇರುವ ಚಿನ್ನಕ್ಕಾಗಿ ವಿಮೆ (Gold Insurance) ಮಾಡಿಸಿಕೊಳ್ಳಬಹುದು. ಇದನ್ನು ನೀವು ಚಿನ್ನ ಖರೀದಿ ಮಾಡುವಾಗ ಮಾಡಿಸಬಹುದಾಗಿದ್ದು, ಇದೊಂದು ಉಚಿತವಾದ ವಿಮೆ (Free Insurance) ಆಗಿರುತ್ತದೆ. ಚಿನ್ನಕ್ಕಾಗಿಯೇ ವಿಶೇಷವಾಗಿ ಈ ರೀತಿ ವಿಮೆ ಮಾಡಿಸಬಹುದು ಅಥವಾ ಹೋಮ್ ವಿಮೆಯಲ್ಲಿ ಚಿನ್ನವನ್ನು ಆಯ್ಕೆ ಮಾಡಿದರೆ, ಆಗ ಚಿನ್ನ ಕೂಡ ಇನ್ಷುರೆನ್ಸ್ ಗೆ ಒಳಪಡುತ್ತದೆ.
ಈ ರೀತಿ ನಿಮ್ಮ ಚಿನ್ನವನ್ನು ಸೆಕ್ಯೂರ್ ಮಾಡಿಕೊಳ್ಳಬಹುದು. ಹೀಗೆ ವಿಮೆ ಮಾಡಿಸಿಕೊಂಡರೆ, ನಿಮ್ಮ ಹತ್ತಿರ ಇರುವ ಚಿನ್ನ, ಯಾವುದೇ ಸಮಸ್ಯೆ ಆಗಿ ಕಳೆದುಹೋದರೆ, ಪ್ರಕೃತಿ ವಿಕೋಪಕ್ಕೆ ಒಳಪಟ್ಟರೆ, ಸುಟ್ಟು ಹೋದರೆ, ನಿಮಗೆ ಹೊಸ ಚಿನ್ನ ಸಿಗುತ್ತದೆ. ಆದರೆ ಇದಕ್ಕಾಗಿ ನೀವು ಚಿನ್ನ ಖರೀದಿ ಮಾಡಿರುವ ರಿಸಿಪ್ಟ್ ನಿಮ್ಮ ಹತ್ತಿರ ಇರಬೇಕು. ಇದು ಮುಖ್ಯವಾಗುತ್ತದೆ, ವಿಮೆ ಕಂಪನಿಯವರು ನಿಮಗೆ ಚಿನ್ನ ನೀಡುವುದಕ್ಕೆ ಈ ಒಂದು ದಾಖಲೆಯನ್ನು ಪ್ರಮುಖವಾಗಿ ಕೇಳಬಹುದು. ಹಾಗಾಗಿ ಚಿನ್ನ ಖರೀದಿಯ ರೆಸಿಪ್ಟ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳಿ.