ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಅದರ ನೀರನ್ನು ಪ್ರತಿದಿನ ಬೆಳಗ್ಗೆ ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಾಯವಾಗುತ್ತದೆ.
ಇದರಲ್ಲಿ ಕರಗುವ ಫೈಬರ್ ಇದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಬೆರೆಸಿದ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಹೊಟ್ಟೆಯನ್ನು ಶುದ್ದೀಕರಿಸಿ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಪುದೀನಾ, ದಾಲ್ಚಿನಿ ಮುಂತಾದ ಗಿಡಮೂಲಿಕೆಗಳ ಚಹಾಗಳನ್ನು ಬೆಳಗ್ಗೆ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.