ಮೈಸೂರು : ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಉಂಟಾಗಿದ್ದು ಶುಕ್ರವಾರ ಸಂಜೆ 6.45 ಕ್ಕೆ ಭೂಕುಸಿತ ಸಂಭಾವಿಸಿದ ಹಿನ್ನೆಲೆ ಶುಕ್ರವಾರ ಸಂಜೆಯಿಂದಲೇ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ನಿನ್ನೆ ರಾತ್ರಿಯೇ ಕಾರವಾರ, ಮುರ್ಡೇಶ್ವರ, ಕಣ್ಣೂರು ಮಾರ್ಗದಿಂದ ಬೆಂಗಳೂರಿಗೆ ಬರಬೇಕಿದ್ದ ರೈಲುಗಳನ್ನು ರೈಲ್ವೇ ಇಲಾಖೆ ನಿಯಂತ್ರಿಸಿದ್ದು ಭೂಕುಸಿತ ಸಂಬಂಧಿಸಿದ ಜಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಕಾರವಾರ, ಮಂಗಳೂರು , ವಿಜಯಪುರದ ರೈಲುಗಳ ಓಡಾಟ ರದ್ದು ಮಾಡಲಾಗಿದೆ. 3 ರೈಲುಗಳನ್ನ ನೈರುತ್ಯ ರೈಲ್ವೇ ಇಲಾಖೆ ರದ್ದುಗೊಳಿಸಿದೆ. ಇಂದು ಹೊರಡಬೇಕಿದ್ದ ಯಾವ ರೈಲುಗಳು ರದ್ದಾಗಿದೆ ಅಂತ ನೋಡೋದದ್ರೆ ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜೆಎನ್ ಎಕ್ಸ್‌ಪ್ರೆಸ್ ಜೆಸಿಒ 27.07.2024 ರದ್ದಾಗಿದೆ. 2. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್ ಜೆಸಿಒ 27.07.2024 ರದ್ದಾಗಿದೆ. 3. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ನೆನ್ನೆ ಎಸ್‌ಎಸ್‌ಎಸ್ ಹುಬ್ಬಳ್ಳಿ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಮಡಗಾಂವ್, ಕಾರವಾರ, ತೋಕೂರು, ಮಂಗಳೂರು ಮೂಲಕ ತಿರುಗಿಸಲಾಗಿದೆ. ಮೈಸೂರು, ಹಾಸನ ಮತ್ತು ಅರಸೀಕೆರೆಯಲ್ಲಿ ಮಾರ್ಗ ಬದಲಿಸಿದ ರೈಲುಗಳ ಬಗ್ಗೆ ಮಾಹಿತಿ ನೀಡಲು ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್‌ನ ಪ್ರಯಾಣಿಕರಿಗೆ ಆಹಾರ ವ್ಯವಸ್ಥೆ ಮಾಡಿದ್ದು ಟ್ರೈನ್ ನಲ್ಲಿದ್ದ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.