ನವದೆಹಲಿ: ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ಅವರ ತಾಯಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ತಮ್ಮ ಜನಪ್ರಿಯ ಸರಣಿ ‘ಗಂದಿ ಬಾತ್’ನಿಂದಾಗಿ ಏಕ್ತಾ ಕಪೂರ್ ತೊಂದರೆಗೆ ಸಿಲುಕಿದ್ದಾರೆ.
ಈ ವಿವಾದಾತ್ಮಕ ವೆಬ್ ಸರಣಿಯ 6 ಸೀಸನ್‌ಗಳು ಇದುವರೆಗೆ ಬಿಡುಗಡೆಯಾಗಿವೆ. ಈ ಸರಣಿಯನ್ನು ಬ್ಯಾನ್ ಮಾಡಬೇಕೆಂದು ಬಾರಿ ಒತ್ತಾಯ ಬಂದಿದೆ. ಒಟಿಟಿ ಪ್ಲಾಟ್‌ಫಾರ್ಮ್ ಆಲ್ಟ್ ಬಾಲಾಜಿ ಅವರ ‘ಗಂದಿ ಬಾತ್’ ವೆಬ್ ಸರಣಿಯ ಸಂಚಿಕೆಯಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಿದ್ದಕ್ಕಾಗಿ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ.
ಆಲ್ಟ್ ಬಾಲಾಜಿ ಟೆಲಿಫಿಲ್ಮ್ ಲಿಮಿಟೆಡ್‌ನ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಮುಂಬೈನ ಎಂಹೆಚ್‌ಬಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295-ಎ, ಐಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 13 ಮತ್ತು 15 ರ ಅಡಿಯಲ್ಲಿ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.