ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ನಿವೇಶನಗಳ ಮಾಲೀಕರು ಇ-ಸ್ವತ್ತು ಹಾಗೂ ಮುಟೇಷನ್ (ಆಸ್ತಿ ಹಕ್ಕು ವರ್ಗಾವಣೆ) ಕೋರಿ ಅರ್ಜಿ ಸಲ್ಲಿಸುವಾಗ ಸ್ವಚ್ಛಗೊಳಿಸಿದ ನಿವೇಶನ ಛಾಯಚಿತ್ರ ಸಲ್ಲಿಸುವುದ ಕಡ್ಡಾಯವಾಗಿ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
ಬಹಳ ಜನರು ನಿವೇಶನ ಛಾಯಚಿತ್ರಗಳಲ್ಲಿ ಕಸದ ರಾಶಿ, ಗಿಡಗಳು ಬೆಳೆದಿರುವುದು ಕಂಡುಬರುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಗರ ಸೌಂದರ್ಯಕ್ಕೂ ಇದು ಹಾನಿ ಉಂಟುಮಾಡುತ್ತದೆ. ಖಾಲಿ ನಿವೇಶನದಲ್ಲಿ ಗಿಡಗಳು ಬೆಳೆದಿರುವುದರಿಂದ ನಿವೇಶನ ಸಂಖ್ಯೆ, ಅಳತೆ ಕಲ್ಲುಗಳು ಛಾಯಚಿತ್ರದಲ್ಲಿ ಕಾಣಿಸುವುದಿಲ್ಲ. ಈ ಕಾರಣದಿಂದಾಗಿ ಇ-ಸ್ವತ್ತು ಪಡೆಯುವ ಸಂದರ್ಭದಲ್ಲಿ ಸಲ್ಲಿಸುವ ಗಿಡ ಗಂಟೆಗಳು, ಕಸದ ರಾಶಿ ಇಲ್ಲದ ಛಾಯಚಿತ್ರಗಳನ್ನೇ ಸಲ್ಲಿಸುವಂತೆ ಸಾರ್ವಜನಿಕರಿಗೆ ಈ ಮೂಲಕ ಕೋರಲಾಗಿದೆ.
ನಿವೇಶನಗಳನ್ನು ಕಾಲ ಕಾಲಕ್ಕೆ ಮಾಲಿಕರು ಸ್ವಚ್ಛಗೊಳಿಸದೇ ಇದ್ದರೇ, ನಿಯಮಾನುಸಾರ ನಗರಸಭೆಯಿಂದ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತೆ ಎಂ.ರೇಣುಕಾ ಎಚ್ಚರಿಸಿದ್ದಾರೆ.