ಬೆಲ್ಲ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಆಯುರ್ವೇದದಲ್ಲಿ ಬೆಲ್ಲವನ್ನು ಔಷಧಿ ಎಂದೇ ಪರಿಗಣಿಸಲಾಗಿದೆ.
ಶೀತ ವಾತಾವರಣದಲ್ಲಿ ರಾತ್ರಿ ಊಟದ ನಂತರ ಬೆಲ್ಲವನ್ನು ಸೇವಿಸುತ್ತಾ ಬಂದರೆ ಅದ್ಭುತ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ರಾತ್ರಿ ಬೆಲ್ಲ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆಯ ಯಾವುದೇ ಸಮಸ್ಯೆಗೆ ಬೆಲ್ಲವು ಸುಲಭವಾದ ಮತ್ತು ಅತ್ಯಂತ ಪ್ರಯೋಜನಕಾರಿ ಪರಿಹಾರವಾಗಿದೆ. ರಾತ್ರಿ ಬೆಲ್ಲ ತಿಂದರೆ ಗ್ಯಾಸ್, ಅಜೀರ್ಣ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ.ಮಲಬದ್ಧತೆ ಇದ್ದರೆ ನೀವು ರಾತ್ರಿ ಬೆಲ್ಲವನ್ನು ತಿನ್ನಲು ಪ್ರಾರಂಭಿಸಲೇಬೇಕು. ಊಟದ ನಂತರ ಬೆಲ್ಲದ ತುಂಡು ತಿಂದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಚಳಿಗಾಲದಲ್ಲಿ ಪದೇ ಪದೇ ನೆಗಡಿ ಮತ್ತು ಕೆಮ್ಮು ಬರುತ್ತಿದ್ದರೆ ಬೆಲ್ಲವನ್ನು ತಿನ್ನಲು ಪ್ರಾರಂಭಿಸಬೇಕು. ರಾತ್ರಿ ಹೊತ್ತು ಬೆಲ್ಲವನ್ನು ತಿಂದರೆ, ಶೀತ, ಕೆಮ್ಮು ಮತ್ತು ಕಫದಿಂದ ಪರಿಹಾರವನ್ನು ಪಡೆಯಬಹುದು. ಬೆಲ್ಲವನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಮತ್ತೂ ಒಳ್ಳೆಯದು.
ಬೆಲ್ಲವು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಸ್ವಲ್ಪ ಬೆಲ್ಲವನ್ನು ಸೇವಿಸುವುದರಿಂದ ಮೊಡವೆಗಳು ಮಾಯವಾಗುತ್ತವೆ. ಅಲ್ಲದೆ, ಚರ್ಮವು ಹೊಳೆಯುವಂತೆ ಮಾಡುತ್ತದೆ ಮತ್ತು ಬೆಲ್ಲವು ಒಳಗಿನಿಂದ ತ್ವಚೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಬೆಲ್ಲದಲ್ಲಿ ಪೊಟ್ಯಾಸಿಯಮ್ ಇದ್ದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದ್ರೋಗಿಗಳು ಸಕ್ಕರೆಯ ಬದಲು ಬೆಲ್ಲವನ್ನು ಬಳಸಬೇಕು ಅದು ಅವರಿಗೆ ಪ್ರಯೋಜನಕಾರಿಯಾಗಿದೆ.