ಕೋಲಾರ: ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲಾರ ಮೂಲದ ಯೋಧರೊಬ್ಬರು ನೀಲ್ಗಾಯ್ ದಾಳಿಯಿಂದ ಮೃತಪಟ್ಟಿದ್ದಾರೆ.ನಗರದ ಗಲ್ಪೇಟೆ ನಿವಾಸಿ ಹರ್ಷಿತ್ ಪ್ರಸನ್ನ (22) ಎನ್ನುವ ಯೋಧ ಸಾವನ್ನಪ್ಪಿದವರು. ಜಿಂಕೆ ಮಾದರಿಯ ನೀಲ್ಗಾಯ್ ಎಂಬ ಕಾಡುಪ್ರಾಣಿಯ ಮರಿಗಳು, ಪ್ಲಾಸ್ಟಿಕ್ ತಿನ್ನಲು ಮುಂದಾದಾಗ ಅದನ್ನು ತಡೆಯಲು ಇವರು ಹೋಗಿದ್ದಾರೆ. ಈ ವೇಳೆ ನೀಲ್ಗಾಯ್ ಹಿಂಬದಿಯಿಂದ ಬಂದು ಹರ್ಷಿತ್ ಬೆನ್ನಿಗೆ ತಿವಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರು ಕಳೆದ 4 ವರ್ಷಗಳಿಂದ ನೌಕಾಪಡೆಯ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಕೋಲಾರದ ರುಧ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.