ದೆಹಲಿ: ಲೋಕಸಭಾ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಮತದಾನದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ EC ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದೆ.
ಆದರೆ, ಈ ಪ್ರಕ್ರಿಯೆಗೆ ಉಳಿದಿರುವುದು 1 ದಿನ ಮಾತ್ರ. ನಾಳೆಯೊಳಗೆ ನೋಂದಣಿ ಮಾಡಿಕೊಂಡರೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಮತ ಹಾಕಲು ಸಾಧ್ಯ. ಮತದಾರರ ಸಹಾಯವಾಣಿ ಆಪ್ ಡೌನ್ಲೋಡ್ ಮಾಡಿ. ಫಾರ್ಮ್ 6ನಲ್ಲಿ 2ನೇ ಆಯ್ಕೆ ಆರಿಸಿ. ಅಗತ್ಯ ಮಾಹಿತಿ ತುಂಬಿಸಿ ನೋಂದಣಿ ಮಾಡಿ.