“ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ ರೈತರಿಗೆ ಆರ್ಥಿಕ ಸಹಾಯ ಮತ್ತು ಸಬ್ಸಿಡಿ ನೀಡಲಾಗುತ್ತಿದೆ.
ಕೋಳಿ ಫಾರಂ ಹೌಸ್: ಕೋಳಿ ಸಾಕಾಣಿಕೆಗೆ ಆಕರ್ಷಕವಾದ ಯೋಜನೆಗಳೊಂದಿಗೆ 25 ಲಕ್ಷ ರೂ. ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಇದು ಸ್ಥಳೀಯ ಹೂಡಿಕೆದಾರರು ಮತ್ತು ಹೊಸ ರೈತರಿಗೆ ದೊಡ್ಡ ಆರ್ಥಿಕ ಸಹಾಯವಾಗುತ್ತದೆ.
ಕುರಿ ಮತ್ತು ಮೇಕೆ ಸಾಕಣೆ ಘಟಕ: ಈ ಘಟಕವನ್ನು ಸ್ಥಾಪಿಸಲು 50 ಲಕ್ಷ ರೂ.ವರೆಗೆ ಸಹಾಯಧನ ಲಭ್ಯವಿದೆ. ಇದರಿಂದ ಜಾನುವಾರುಗಳ ಸಾಕಾಣಿಕೆ ಹಾಸುಹೊಕ್ಕಾಗಿ ಬೆಳೆದು ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ.
ಹಂದಿ ಸಾಕಣೆ ಕೇಂದ್ರ: ಹಂದಿಗಳನ್ನು ಸಾಕಲು 30 ಲಕ್ಷ ರೂ.ಗಳ ಆರ್ಥಿಕ ನೆರವು ಲಭ್ಯವಿದೆ. ಇದರಿಂದ ಈ ವ್ಯಾಪಾರದಲ್ಲಿ ಸಣ್ಣ ಮಟ್ಟದ ರೈತರು ಉತ್ತಮ ಪ್ರಗತಿಯನ್ನು ಸಾಧಿಸಬಹುದು.
ಮೇವು ಸಂಗ್ರಹಣಾ ಸೌಲಭ್ಯ: ಮೇವು ಸಂಗ್ರಹಿಸಲು ಮತ್ತು ಸಂರಕ್ಷಿಸಲು 50 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ.
ವಿಶಿಷ್ಟ ತಳಿ(Breed )ಜಾನುವಾರು ಸಾಕಾಣಿಕೆ: ಕುದುರೆಗಳು, ಕತ್ತೆಗಳು, ಹೇಸರಗತ್ತೆಗಳು ಮತ್ತು ಒಂಟೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ 50% ಸಹಾಯಧನ ನೀಡಲಾಗುತ್ತಿದೆ.
ಯಾರು ಈ ಯೋಜನೆಯ ಲಾಭ ಪಡೆಯಬಹುದು?: ಖಾಸಗಿ ವ್ಯಕ್ತಿಗಳು, ಸ್ವಸಹಾಯ ಗುಂಪುಗಳು (Self Help Groups, SHG), ರೈತ ಉತ್ಪಾದಕ ಸಂಸ್ಥೆಗಳು (Farmer Producer Organizations, FPO), ರೈತ ಸಹಕಾರಿಗಳು (Farmer Cooperatives, FCO), ಜಂಟಿ ಹೊಣೆಗಾರಿಕೆ ಗುಂಪುಗಳು (Joint Liability Groups, JLG) ಮತ್ತು ವಿಭಾಗ 8 ಕಂಪನಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.