ಹೊಸಪೇಟೆ : ಶಿಸ್ತುಬದ್ಧ ಸಂಶೋಧನೆಗೆ ಜಾಗತಿಕವಾಗಿ ಹೆಸರಾದ ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವ ವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಈ ಬಾರಿ ಒಬ್ಬರಿಗೆ ಡಿ.ಲಿಟ್ ಹಾಗೂ ದಾಖಲೆಯ 275 ಜನರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.
ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಅವರು
ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಈ ವೇಳೆ ಕುಲಪತಿಗಳಾದ ಡಾ.ಡಿ.ವಿ.ಪರಮ ಶಿವಮೂರ್ತಿ, ಕುಲಸಚಿವರಾದ ವಿಜಯ್ ಪೂನಚ್ಛ ತಂಬಂಡ ಹಾಗೂ ನಾಡೋಜ್ ಪದವಿ ಪುರಸ್ಕೃತರು ಸಂಶೋಧನಾರ್ಥಿಗಳಿಗೆ ಅಭಿನಂದಿಸಿದರು.
ಕುಟುಂಬದವರಿಂದ ಹರ್ಷ: ಹಲವು ವರ್ಷಗಳ ಶಿಸ್ತುಬದ್ಧ ಸಂಶೋಧನಾ ಕಾರ್ಯದ ಫಲವಾದ ಡಾಕ್ಟರೇಟ್ ಪದವಿಗೆ 375 ಸಂಶೋಧನಾರ್ಥಿಗಳು ಭಾಜನರಾದರು. ವೇದಿಕೆ ಏರಿ ಕುಲಾಧಿಪತಿಗಳಿಂದ ಡಾಕ್ಟರೇಟ್ ಪದವಿ ಪಡೆದ ಸಂಶೋಧನಾರ್ಥಿಗಳ ಮೊಗದಲ್ಲಿ ಸಂತಷ ಕಂಡು ಬಂದಿತು. ಹಲವು ವರ್ಷಗಳ ಕಾರ್ಯಸಾಧನೆಯನು ಕಂಡು ಸಂಶೋಧನಾರ್ಥಿಗಳ ಕುಟುಂಬದವರು ಸಹ ಹರ್ಷ ವ್ಯಕ್ತಪಡಿಸಿದರು. ಗೆಳೆಯರು ಮತ್ತು ವಿದ್ಯಾರ್ಥಿ, ಅಧ್ಯಾಪಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಲಲಿತ ಕಲೆಗಳ ನಿಕಾಯದ ಒಬ್ಬರಿಗೆ ಡಿ.ಲಿಟ್ ಪದವಿ ಹಾಗೂ ಭಾಷಾ ನಿಕಾಯ, ಸಮಾಜವಿಜ್ಞಾನಗಳ ನಿಕಾಯ ಮತ್ತು ಲಲಿತಕಲೆಗಳ ನಿಕಾಯ ಸೇರಿ ಒಟ್ಟು 275 ಜನರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು