ಕಳೆದ ಎರಡು ವಾರಗಳ ಹಿಂದೆ ನುಹ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಬಿಟ್ಟು ಬಜರಂಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಯಂ ಘೋಷಿತ ಗೋರಕ್ಷಕ ಬಿತ್ತು ಬಜರಂಗಿಗೆ ಬಜರಂಗದಳದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿದೆ. ಭಜರಂಗದಳದ ಕಾರ್ಯಕರ್ತ ಎಂದು ಹೇಳಲಾದ ಬಜರಂಗಿಯನ್ನು ಹರಿಯಾಣದ ನುಹ್‌ನಲ್ಲಿ ‘ಪ್ರಚೋದನಕಾರಿ ಹೇಳಿಕೆ’ ನೀಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಬಂಧಿಸಲಾಗಿದೆ. ಬಿಟ್ಟು ಬಜರಂಗಿ ಗೋರಕ್ಷಾ ಬಜರಂಗ ಫೋರ್ಸ್ ಎಂಬ ಸಂಘಟನೆಯ ಮುಖ್ಯಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಫರಿದಾಬಾದ್‌ನಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿದ್ದಾನೆ.