ನೆತನ್ಯಾಹು ಮನೆ ಮೇಲೆ ದಾಳಿಗೆ ಇಸ್ರೇಲ್ ನಿಂದ ಪ್ರತಿದಾಳಿ : 12 ಜನ ಸಾವು !

WhatsApp
Telegram
Facebook
Twitter
LinkedIn

ಟೆಲ್‌ ಅವೀವ್‌ : ಇಸ್ರೇಲ್ ಪ್ರಧಾನಿ ನಿವಾಸದ ಮೇಲೆ ದಾಳಿ ನಡೆದ ಬೆನ್ನಲ್ಲೇ, ಭಾನುವಾರ ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಸುಮಾರು 12 ಜನರು ಮೃತಪಟ್ಟಿದ್ದಾರೆ.

ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕೇಂದ್ರೀಯ ಗಾಜಾ ಪಟ್ಟಿಯ ನಸೀರತ್‌ ನಿರಾಶ್ರಿತರ ಶಿಬಿರದಲ್ಲಿ ಆರು ಮಂದಿ, ಬುರೇಜ್ ನಿರಾಶ್ರಿತರ ಶಿಬಿರದಲ್ಲಿ ನಾಲ್ವರು ಮತ್ತು ಗಾಜಾದ ಉತ್ತರ–ದಕ್ಷಿಣ ಹೆದ್ದಾರಿಯಲ್ಲಿ ನಡೆದ ದಾಳಿಯೊಂದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಡೀರ್‌ ಅಲ್‌–ಬಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ತಿಳಿಸಿದೆ. ಶನಿವಾರ ಪ್ರಧಾನಿ ಬೆಂಜಮನ್ ನೆತನ್ಯಾಹು ನಿವಾಸದ ಮೇಲೆ ಬಾಂಬ್‌ ದಾಳಿ ನಡೆಸಿದ್ದರು.

ದಾಳಿಯ ವೇಳೆ ಪ್ರಧಾನಿ ಮತ್ತು ಅವರ ಕುಟುಂಬದವರು ನಿವಾಸದಲ್ಲಿ ಇರಲಿಲ್ಲ ಮತ್ತು ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಧಾನಿ ನಿವಾಸದ ಮೇಲಿನ ದಾಳಿಯನ್ನು ಖಂಡಿಸಿರುವ ಇಸ್ರೇಲ್ ಅಧ್ಯಕ್ಷ ಐಸಾಕ್‌ ಹರ್ಜಾಗ್‌ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ .

BC Suddi   About Us
For Feedback - [email protected]

Related News

LATEST Post

WhatsApp Icon Telegram Icon