ಭಾರತ್ ರಾಷ್ಟ್ರ ಸಮಿತಿ(BRS)ಮುಖಂಡ ಹಾಗೂ ತೆಲಂಗಾಣದ ಮಾಜಿ ಉಪಮುಖ್ಯಮಂತ್ರಿ ತಾಟಿಕೊಂಡ ರಾಜಯ್ಯ ಚುನಾವಣೆ ಸ್ಪರ್ಧೆಗೆ ಟಿಕೆಟ್ ಸಿಗದ ಹಿನ್ನೆಲೆ ನೆಲದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಘಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ಗಾಗಿ ಅವರು ಬೇಡಿಕೆ ಇಟ್ಟಿದ್ದರು ಆದರೆ ಪಕ್ಷವು ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದೆ.
ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೆ ತಮಗೆ ಟಿಕೆಟ್ ಸಿಗಲಿಲ್ಲ ಎಂದು ಭಾರತ್ ರಾಷ್ಟ್ರ ಸಮಿತಿ(BRS)ಮುಖಂಡ ಹಾಗೂ ತೆಲಂಗಾಣದ ಮಾಜಿ ಉಪಮುಖ್ಯಮಂತ್ರಿ ತಾಟಿಕೊಂಡ ರಾಜಯ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ. ಆದರೆ ಬಿಆರ್‌ಎಸ್ ಪಕ್ಷವು ಆಗಸ್ಟ್ 21 ರಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವರದಿಗಳ ಪ್ರಕಾರ, ತಾಟಿಕೊಂಡ ರಾಜಯ್ಯ ಅವರ ಸ್ವಂತ ಪಕ್ಷದ ಗ್ರಾಮ ಸರಪಂಚರಿಂದ ಲೈಂಗಿಕ ಕಿರುಕುಳದ ಆರೋಪವಿದೆ.ಈ ಆರೋಪಗಳಿಂದಾಗಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದೆ. ಕದಿಯಂ ಶ್ರೀಹರಿಯವರಿಗೆ ಪಕ್ಷವು ಘನಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
        
        
				
				
															
                    
                    
                    
                    
                    
































