ಲಾಸ್ ವೇಗಾಸ್: ಲಾಸ್ ವೇಗಾಸ್ನ ನೆವಾಡಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವ್ಯಕ್ತಿಯೊಬ್ಬರು ಬುಧವಾರ ಗುಂಡು ಹಾರಿಸಿದ ಪರಿಣಾಮವಾಗಿ ಗುಂಡೇಟಿಗೆ ಮೂರು ಜನರು ಸಾವನ್ನಪ್ಪಿದ್ದಾರೆ, ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಶೂಟರ್ ಮೃತಪಟ್ಟಿರುವುದು ಪತ್ತೆಯಾಗಿದೆ. ಶೆರಿಫ್ ಕೆವಿನ್ ಮೆಕ್ಮಹಿಲ್ ಎಕ್ಸ್ ಖಾತೆಯಲ್ಲಿ ಗಾಯಗಳ ವ್ಯಾಪ್ತಿಯು ಪ್ರಸ್ತುತ ತಿಳಿದಿಲ್ಲ, ಆದರೆ ಗಾಯಗೊಳಗಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾನಿಲಯದ ಪೊಲೀಸ್ ಅಧಿಕಾರಿ ಆದಮ್ ಗಾರ್ಸಿಯಾ ಅವರ ಪ್ರಕಾರ, ಅಧಿಕಾರಿಗಳು ಶಂಕಿತರನ್ನು ಪತ್ತೆಹಚ್ಚಿದ್ದಾರೆ ನಂತರ ಶಂಕಿತನು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಶಂಕಿತನ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಕ್ಯಾಂಪಸ್ನಲ್ಲಿರುವ 30,000 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ತರಗತಿ ಕೊಠಡಿಗಳು ಮತ್ತು ವಸತಿ ಕೊಠಡಿಗಳಲ್ಲಿ ಆಶ್ರಯ ಪಡೆದರು ಎಂದರು.
ವಿದ್ಯಾರ್ಥಿ ಜಾನ್ ಹ್ಯಾರಿಸ್ ಅವರು ಕ್ಯಾಂಪಸ್ ಅಪಾರ್ಟ್ಮೆಂಟ್ ಸಂಕೀರ್ಣದ ಪಾರ್ಕಿಂಗ್ ಏರಿಯಾದಲ್ಲಿ ತಮ್ಮ ಕಾರಿನಿಂದ ನಿರ್ಗಮಿಸುವಾಗ ಬಂದೂಕಿನ ಗುಂಡು ಕೇಳಿಬಂದಿತ್ತು. ತಕ್ಷಣವೆ ಹ್ಯಾರಿಸ್, ಸ್ನೇಹಿತನೊಬ್ಬನ ವಸತಿಗೃಹದಲ್ಲಿ ಆಶ್ರಯ ಪಡೆದರು. ಆದಾಗ್ಯೂ, ವಿದ್ಯಾರ್ಥಿಗಳು ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳ ಗುಂಪನ್ನು ನೋಡಿದ ನಂತರ, ತಾನು ಕೇಳಿದ ಶಬ್ದವು ನಿಜವಾಗಿಯೂ ಗುಂಡೇಟಿದ್ದು ಎಂದು ಖಚಿತವಾಯಿತು.
ಸುಮಾರು 40 ನಿಮಿಷಗಳ ನಂತರ, ಶಂಕಿತನೊಬ್ಬ ಪತ್ತೆಯಾಗಿದ್ದಾನೆ ಮತ್ತು ಸತ್ತಿರುವುದಾಗಿ ಲಾಸ್ ವೇಗಾಸ್ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವಿಶ್ವವಿದ್ಯಾನಿಲಯವು ತುರ್ತು ಪರಿಸ್ಥಿತಿಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಮಾಹಿತಿ ನೀಡಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಶ್ವವಿದ್ಯಾನಿಲಯವು, ಎಲ್ಲಾ ವಿದ್ಯಾರ್ಥಿಗಳಿಗು ದೈರ್ಯದಿಂದ ಇರುವಂತೆ ಸೂಚನೆ ನೀಡಿದರು.
ಯಾವ ಅಪಾಯಗಳು ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳಲ್ಲಿ ವಿಶ್ಚಾಸ ತುಂಬಿದರು. 2017 ರಲ್ಲಿ ಮ್ಯಾಂಡಲೆ ಬೇ ಕ್ಯಾಸಿನೊದಲ್ಲಿ ನಡೆದ ವಿನಾಶಕಾರಿ ಸಾಮೂಹಿಕ ಗುಂಡಿನ ದಾಳಿಯಿಂದ 60 ಜನರ ಸಾವಿಗೆ ಕಾರಣವಾದ ಈ ಘಟನೆಯಿಂದ ಇನ್ನೂ ಚೇತರಿಸಿಕೊಳ್ಳದ ಜನರು, ಇದೀಗ ಮತ್ತೆ ಲಾಸ್ ವೇಗಾಸ್ನಲ್ಲಿರುವ ನೆವಾಡಾ ವಿಶ್ವವಿದ್ಯಾಲಯವು ಬಂದೂಕು ಹಿಂಸಾಚಾರದ ಭಯಾನಕ ಕೃತ್ಯವನ್ನು ಅನುಭವಿಸುತ್ತಿದೆ.