ನವದೆಹಲಿ: ನೆರೆಯ ನೇಪಾಳದಲ್ಲಿ ಇಂದು ಸತತ 2 ಭೂಕಂಪನಗಳು ಸಂಭವಿಸಿದ್ದು, ಇದರ ಬೆನ್ನಲ್ಲೇ ಉತ್ತರ ಭಾರತದ ದೆಹಲಿ ಮತ್ತು ಎನ್ ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಅನೇಕ ನೆಟ್ಟಿಗರು ಕಂಪನದ ಅನುಭವದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಭೂಕಂಪವು ನಾನು ಅನುಭವಿಸಿದ ಪ್ರಬಲವಾದ ಭೂಕಂಪಗಳಲ್ಲಿ ಒಂದಾಗಿದೆ.
ಭೂಕಂಪನದ ರಾಷ್ಟ್ರೀಯ ಕೇಂದ್ರವು ನೇಪಾಳದಲ್ಲಿ ಸಂಭವಿಸಿದ ಮೊದಲ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಿದ್ದು, ನೇಪಾಳದ Lat: 29.39 ಮತ್ತು Long: 81.23ರಲ್ಲಿ 5 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ. 2ನೇ ಕಂಪನದ ಕೇಂದ್ರ ಬಿಂದು magnitude 6.2ರಲ್ಲಿ ದಾಖಲಾಗಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಪೊಲೀಸರು ಟ್ವೀಟ್ ಮಾಡಿ, ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ, ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬನ್ನಿ, ಆದರೆ ಗಾಬರಿಯಾಗಬೇಡಿ, ಎಲಿವೇಟರ್ಗಳನ್ನು ಬಳಸಬೇಡಿ, ತುರ್ತು ಸಹಾಯಕ್ಕಾಗಿ 112 ಡಯಲ್ ಮಾಡಿ ಎಂದು ತಿಳಿಸಿದ್ದಾರೆ.
ಉತ್ತರ ಭಾರತದ ದೆಹಲಿ. ಎನ್ ಸಿಆರ್, ಹರ್ಯಾಣ, ನೋಯ್ಡಾದಲ್ಲೂ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.