ನೇಹಾಕೊಲೆ ಪ್ರಕರಣ: ‘ತನಿಖೆ ಸಿಐಡಿಗೆ, ತ್ವರಿತ ವಿಚಾರಣೆಗೆ ವಿಶೇ ಷ ನ್ಯಾಯಾಲಯ ಸ್ಥಾಪನೆ’- ಸಿಎಂ

ಶಿವಮೊಗ್ಗ : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗುವುದು ಪ್ರಕರಣದ ತ್ವರಿತ ವಿಚಾರಣೆಗೆ ವಿಶೇ ಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಕುಟುಂಬದ ಪರವಾಗಿ ಸರ್ಕಾರ ಇದೆ. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಎಚ್.ಕೆ.ಪಾಟೀ ಲ, ಸಂತೋ ಷ ಲಾಡ್ ನೇಹಾ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ ಎಂದರು.

ಜಾತ್ಯತೀತ ಶಕ್ತಿಗಳ ಮತ ವಿಭಜನೆ ಆಗದಂತೆ ತಡೆಯಲು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಸ್ಪಂದಿಸುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಶಿವಮೊಗ್ಗ ಕ್ಷೇ ತ್ರದಲ್ಲಿ ಕಾಂ ಗ್ರೆಸ್- ಬಿಜೆಪಿ ನಡುವೆ ಹೊ ದಾಣಿಕೆಯಾಗಿದೆ ಎಂಬ ಕೆ.ಎಸ್.ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದೆ’ ಎಂದು ಪುನರುಚ್ಚರಿಸಿದರು. ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ 20ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದರು.

ಕಾಂಗ್ರೆಸ್ನಿಂದ ದೇ ಶದ ಭದ್ರತೆಗೆ ಅಪಾಯ ಎಂದು ಬಿಜೆಪಿ ಮಾಧ್ಯಮಗಳಿಗೆ ಕೊಟ್ಟಿರುವ ಜಾಹೀರಾತಿಗೆ ಪ್ರತಿಕ್ರಿಯಿಸಿದ ಅವರು, ‘ಮತಕ್ಕಾಗಿ ಕೋಮು ಧ್ರುವೀಕರಣದ ರಾಜಕೀಯ ಮಾಡುತ್ತಿರುವ ಬಿಜೆಪಿಯಿಂದಲೇ ದೇಶದ ಭದ್ರತೆಗೆ ಅಪಾಯವಿದೆ’ ಎಂದು ತಿರುಗೇಟು ನೀಡಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement