ಹುಬ್ಬಳ್ಳಿ: ನೇಹಾ ಅಂಜಲಿ ಕೊಲೆ ಪ್ರಕರಣ ಇಂದು ಹುಬ್ಬಳ್ಳಿಗೆ CID DGP ಸಲೀಮ್ ಆಗಮಿಸಿದ್ದಾರೆ. ಇಂದು ಮತ್ತು ನಾಳೆ ಕೊಲೆ ಪ್ರಕರಣದ ಮಾಹಿತಿ ಪಡೆಯಲಿದ್ದಾರೆ.
ಈಗಾಗಲೇ ಎರಡೂ ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸಲೀಮ್ ಅವರು ತನಿಖೆಯ ಮಾಹಿತಿ ಪಡೆಯಲು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಅಂಜಲಿ ಹಂತಕ ವಿಶ್ವನನ್ನು ಮೇ 31ರವರೆಗೂ ಕಸ್ಟಡಿಗೆ ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡು ನಾನಾ ಆಯಾಮಗಳಲ್ಲಿ ಹಂತಕನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ಇಂದು ಸಿಐಡಿ ಡಿಜಿ ಸಲೀಮ್ ಕೂಡಾ ಹಂತಕ ವಿಶ್ವನನ್ನ ವಿಚಾರಣೆ ಮಾಡೋ ಸಾಧ್ಯತೆ ಇದೆ. ವಿಚಾರಣೆ ಬಳಿಕ ನೇಹಾ ಅಂಜಲಿ ಮನೆಗೆ ಸಿಐಡಿ ಡಿಜಿ ಸಲೀಮ್ ನೇಹಾ ಹಾಗೂ ಅಂಜಲಿ ಮನೆಗೆ ಭೇಟಿ ಕೊಡೋ ಸಾಧ್ಯತೆ ಕೂಡ ಇದೆ.