ನೈಟ್‍ಕ್ಲಬ್‍ನಲ್ಲಿ ಅಗ್ನಿ ದುರಂತ – 29 ಮಂದಿ ಮೃತ್ಯು

ಇಸ್ತಾಂಬುಲ್: 16 ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 29 ಜನ ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.

ಆರಂಭದಲ್ಲಿ 10 ಜನ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದರು. ಆದರೆ ಇದೀಗ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಓರ್ವ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಗವರ್ನರ್ ದಾವುತ್ ಗುಲ್ ತಿಳಿಸಿದ್ದಾರೆ.

ಬೆಂಕಿಯು ಮಧ್ಯಾಹ್ನ 12:47ಕ್ಕೆ ಕಾಣಿಸಿಕೊಂಡಿದೆ. ಭಾರೀ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸಪಟ್ಟಿದೆ. ನೈಟ್‍ಕ್ಲಬ್‍ನ್ನು ಹೊಂದಿದ್ದ ಅಂಡರ್‌ಗ್ರೌಂಡ್ ಮೊದಲ ಮತ್ತು 2ನೇ ಮಹಡಿ ನಿರ್ಮಾಣ ಕಾರ್ಯದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement