ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 314 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ..!

WhatsApp
Telegram
Facebook
Twitter
LinkedIn

314 ರೈಲುಗಳ ಸಮಯವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ವಿವಿಧ ನಿಲ್ದಾಣಗಳಲ್ಲಿನ ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿಯನ್ನು ಕ್ರಮ ಸಂಖ್ಯೆ I ರಲ್ಲಿ ಪರಿಷ್ಕರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

ಹುಬ್ಬಳ್ಳಿ : 314 ರೈಲುಗಳ ಸಮಯವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ವಿವಿಧ ನಿಲ್ದಾಣಗಳಲ್ಲಿನ ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿಯನ್ನು ಕ್ರಮ ಸಂಖ್ಯೆ I ರಲ್ಲಿ ಪರಿಷ್ಕರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

ಹೊಸ ರೈಲುಗಳ ಪರಿಚಯ, ರೈಲುಗಳ ಬೋಗಿಗಳ ಹೆಚ್ಚಳ, ರೈಲುಗಳ ವಿಸ್ತರಣೆ, ನೂತನ ನಿಲುಗಡೆ, ಬೋಗಿಗಳ ಶಾಶ್ವತ ಹೆಚ್ಚಳ ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಕ್ರಮ ಸಂಖ್ಯೆ II ರಿಂದ VI ರವರೆಗೆ ಈ ಕೆಳಗೆ ನೀಡಲಾಗಿದೆ.

ಹೊಸ ರೈಲುಗಳ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಗಳ ವಿವರಗಳನ್ನು ನೈರುತ್ಯ ರೈಲ್ವೆ ವಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಸಲಾಗಿದ್ದು ಎಲ್ಲಾ ಪ್ರಯಾಣಿಕರು ಗಮನಿಸಬೇಕು ಎಂದು ನೈರುತ್ಯ ರೈಲ್ವೆಯು ಮನವಿ ಮಾಡುತ್ತಿದೆ.

01.10.2023 ರಿಂದ ಜಾರಿಗೆ ಬರಲಿರುವ ಹೊಸ ವೇಳಾಪಟ್ಟಿಯ ಹೆಚ್ಚಿನ ವಿವರಗಳಿಗಾಗಿ ಪ್ರಯಾಣಿಕರು ದಯವಿಟ್ಟು ಈ ಕೆಳಗಿನ ಲಿಂಕ್‌ನ್ನು ಕ್ಲಿಕ್ ಮಾಡಿ

https://swr.indianrailways.gov.in/  ಅಥವಾ 139 ನಂಬರಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon