ಕ್ವೀನ್ಸ್‌ಲ್ಯಾಂಡ್: ಗೃಹಹಿಂಸೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಲ್ಪಟ್ಟಿದೆ. ಇದರಿಂದ ಆಘಾತಕ್ಕೊಳಗಾಗಿ ಅವರು ಕುಸಿದು ಬಿದ್ದಿದ್ದಾರೆ.
ಮೈಕೆಲ್ ಸ್ಲೇಟರ್ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕ್ವೀನ್ಸ್‌ಲ್ಯಾಂಡ್ ರಾಜ್ಯದ ನ್ಯಾಯಾಲಯವೂ ಜಾಮೀನು ತಿರಸ್ಕರಿಸಿದ್ದು, 54 ವರ್ಷದ ಮಾಜಿ ಕ್ರಿಕೆಟಿಗ ಕುಸಿದುಬಿದ್ದ ತಕ್ಷಣ ಕೋರ್ಟ್ ಸಿಬ್ಬಂದಿ ಸಹಾಯಕ್ಕೆ ಧಾವಿಸಿದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ
ದೂರದರ್ಶನ ನಿರೂಪಕ ಮತ್ತು ಮಾಜಿ ಬ್ಯಾಟ್ಸ್‌ಮನ್ ಕೌಟುಂಬಿಕ ಹಿಂಸಾಚಾರ ಸೇರಿ 19 ಪ್ರಕರಣಗಳು ದಾಖಲಾಗಿವೆ. ಹಲವು ಗಂಭೀರ ವಾಗಿವೆ. ಕೆಲವು ಆರೋಪಗಳಿಗೆ ಸಿಸಿ ಟಿವಿ, ವೀಡಿಯೋ ಸಾಕ್ಷಿಗಳೂ ಸಿಕ್ಕಿವೆ. ಮಹಿಳೆ ಮನೆಗೆ ನುಗ್ಗಿದ್ದು, ಆಕೆಯ ಕತ್ತು ಹಿಸುಕಿದ್ದು, ಶಾರೀರಿಕ ಹಲ್ಲೆ ಮಾಡಿ ಗಂಭೀರ ಗಾಯಗಳಿಗೆ ಕಾರಣವಾಗಿದ್ದಕ್ಕೆ ವೀಡಿಯೋ ಸಾಕ್ಷಿಗಳಿವೆ.
ಪ್ರಕರಣದ ಮುಂದಿನ ಪ್ರಕ್ರಿಯೆಗಳು ನಡೆಯುವಾಗ ಮೇ ತಿಂಗಳಲ್ಲಿ ನ್ಯಾಯಾಲಯದಲ್ಲಿ ನಡೆಯಲಿದೆ