ದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶಗಳಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ಅಧ್ಯಯನ ತಿಳಿಸಿದೆ.
ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಒಟ್ಟು 520 ಸ್ಥಾನಗಳಿವೆ. 2018ರಲ್ಲಿ ಕಾಂಗ್ರೆಸ್ 282 ಸ್ಥಾನಗಳನ್ನು (54.3%) ಗೆದ್ದರೆ, ಬಿಜೆಪಿ 197 ಸ್ಥಾನ (37.8%) ಗೆದ್ದಿತ್ತು. ಈ ಐದೂ ರಾಜ್ಯಗಳ 683 ಸ್ಥಾನಗಳಲ್ಲಿ ಕಾಂಗ್ರೆಸ್ 305 ಸ್ಥಾನ ಗೆದ್ದಿದ್ದರೆ, ಬಿಜೆಪಿ 199 ಸ್ಥಾನಗಳನ್ನು ಗೆಲ್ಲಬಹುದೆಂದು TOI ಹೇಳಿದೆ.