ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಮಾಡಿಸಬೇಕು ಅಂತ ಅಂದುಕೊಂಡಿರುವವರಿಗೆ ಇದು ಬೇಸರದ ಸುದ್ದಿ.
ಯಾಕೆಂದರೆ, APL ಬಿಡಿ, BPL ಕಾರ್ಡ್ ಮಾಡಿಸುವವರಿಗೆ ಸರ್ಕಾರದಿಂದ ಇನ್ನು ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಕಳೆದ ವರ್ಷ ಸಲ್ಲಿಕೆ ಮಾಡಲಾದ BPL & APL ಅರ್ಜಿಗಳ ವಿಲೇವಾರಿ ಇನ್ನೂ ಆಗಿಲ್ಲ.
ಇನ್ನು, ಈ ಕೆಲಸಗಳು ಮುಗಿಯದೇ, ಹೊಸ ಅರ್ಜಿಗಳ ಪ್ರಕ್ರಿಯೆ ಸಾಧ್ಯವೇ ಇಲ್ಲ. ಹೀಗಾಗಿ ಸರ್ಕಾರ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ.