ಬೆಂಗಳೂರು: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಡೆತ್ ನೋಟ್ ಬರೆದಿಟ್ಟು ವಾಟ್ಸಾಪ್ ಸ್ಟೇಟಸ್ ಹಾಕಿ ಬಳಿಕ ನೇಣಿಗೆ ಶರಣಾಗಿದ್ದಾಳೆ.
ಜುಲೈ 2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪವಿತ್ರಾ ಮೊದಲ ಪತಿಗೆ ವಿಚ್ಚೇದನ ನೀಡಿ ಚೇತನ್ ಗೌಡರನ್ನ ಎರಡನೇ ಮದುವೆಯಾಗಿದ್ದಳು. ಚೇತನ್ ಗೌಡ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದರ ಮಾಲೀಕನಾಗಿದ್ದಾನೆ. ಗಂಡನಿಗೆ ಬೇರೊಂದು ಯುವತಿ ಜೊತೆ ಅನೈತಿಕ ಸಂಬಂಧ ಇದೆ ಎಂದು ಮೃತ ಪತ್ನಿ ಪವಿತ್ರಾಗೆ ಗೊತ್ತಾಗಿದೆ. ಈ ವಿಚಾರವಾಗಿ ಪವಿತ್ರಾ ಹಾಗೂ ಚೇತನ್ ಗೌಡ ನಡುವೆ ಜಗಳವಾಗುತ್ತಿತ್ತು. ಈ ಬಗ್ಗೆ ತನ್ನ ತಾಯಿ ಪದ್ಮಮ್ಮ ಬಳಿ ಹೇಳಿದ್ದಳು. ಕೊನೆಗೆ ಮನನೊಂದು ಪವಿತ್ರಾ ಡೆತ್ ನೋಟ್ ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಮಗಳ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ ಮನೆ ಬಳಿ ಬಂದಾಗ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತಳ ತಾಯಿ ಪದ್ಮಮ್ಮರ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಐಪಿಸಿ 306 ಆತ್ಮಹತ್ಯೆ ಪ್ರಚೋದನೆಯಡಿ ದೂರು ದಾಖಲಾಗಿದೆ.