ನ್ಯೂಯಾರ್ಕ್: ಗೂಗಲ್ ನ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ಪತ್ನಿ ನಿಕೋಲ್ ಶಾನಹನ್ ಗೆ ವಿಚ್ಛೇದನ ನೀಡಿದ್ದಾರೆ. ಸೆರ್ಗೆ ಬ್ರಿನ್ ಅವರು ನಿಕೋಲ್ ಶಾನ್ ಹನ್ ಅವರನ್ನು ೫ ವರ್ಷದ ಹಿಂದೆ ಮದುವೆಯಾಗಿದ್ದರು. ಈ ಹಿಂದೆ ಮೊದಲ ಪತ್ನಿ ಆನ್ನೇ ವೊಜಿಕ್ಸಿಯಿಂದ ವಿಚ್ಛೇದನ ಪಡೆದಿದ್ದರು. ಇದೀಗ ನಿಕೋಲ್ ಶಾನಹನ್ ವಕೀಲೆ ಹಾಗೂ ವಾಣಿಜ್ಯೋದ್ಯಮಿಯಾಗಿದ್ದು, ಆಕೆ ವಿರುದ್ಧ ಎಲಾನ್ ಮಸ್ಕ್ ಜೊತೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೆರ್ಗೆ ಬ್ರಿನ್ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಮೇ ತಿಂಗಳಲ್ಲೇ ವಿಚ್ಛೇದನ ದೊರೆತಿದ್ದು, ಈಗ ಮಾಹಿತಿ ಬಹಿರಂಗವಾಗಿದೆ. ಶಾನಹನ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿರಲಿಲ್ಲ. ಕೋರ್ಟ್ ಗೆ ಸಂಗಾತಿಯ ಬೆಂಬಲ ಕೊಡಿಸುವಂತೆ ಶಾನಹನ್ ಪ್ರಾರ್ಥಿಸಿದ್ದರು ಅವರು ಗೌಪ್ಯ ಮಧ್ಯಸ್ಥಿಕೆಯಲ್ಲಿ ವಕೀಲರ ಶುಲ್ಕಗಳು ಮತ್ತು ಆಸ್ತಿಗಳ ವಿಭಜನೆ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಕೋರ್ಟ್ ದಾಖಲೆಗಳ ಮೂಲಕ ತಿಳಿದುಬಂದಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವರ್ಷಗಳ ಕಾಲ ಸ್ನೇಹಿತರಾಗಿದ್ದ ಎಲೋನ್ ಮಸ್ಕ್ ಅವರೊಂದಿಗೆ ತಮ್ಮ ಪತ್ನಿ ಸಂಬಂಧವನ್ನು ಹೊಂದಿದ್ದರು ಎಂದು ಆರೋಪಿಸಿದ್ದರು. ಆದಾಗ್ಯೂ ಮಸ್ಕ್ ಮತ್ತು ಶಾನಹಾನ್ ಇಬ್ಬರೂ ತಮ್ಮ ಆಪಾದಿತ ಸಂಬಂಧವನ್ನು ನಿರಾಕರಿಸಿದ್ದರು.