ಭೋಪಾಲ್: ಮಧ್ಯ ಪ್ರದೇಶದ ನೀಮಚ್‌ನಲ್ಲಿ ಪತಿಯೊಬ್ಬ ಪತ್ನಿಯನ್ನು ಬಾವಿಯಲ್ಲಿ ನೇತು ಹಾಕಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಘಟನೆ ನಡೆದಿದೆ.
ರಾಕೇಶ್ ಕಿರ್ ಎಂಬ ವ್ಯಕ್ತಿ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆಯಿಟ್ಟು ಈ ಕೃತ್ಯವೆಸಗಿದ್ದಾನೆ.
ಇನ್ನು ಪತ್ನಿ ಉಷಾಳನ್ನು ಬಾವಿಯಲ್ಲಿ ನೇತು ಹಾಕಿ, ಅದನ್ನು ಚಿತ್ರೀಕರಿಸಿ ಪತ್ನಿ ಮನೆಯವರಿಗೆ ಕಳುಹಿಸಿದ್ದಾನೆ.
5 ಲಕ್ಷ ರೂ. ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಯಿಟ್ಟಿದ್ದಾನೆ. ಉಷಾಳ ಮನೆಯವರು ವಿಡಿಯೋ ನೋಡಿ ಅದೇ ಗ್ರಾಮದ ಕೆಲವರಿಗೆ ಹೇಳಿ ಮಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದ್ದು, ಪೊಲೀಸರು ಆ ಬಳಿಕ ರಾಕೇಶ್ ನನ್ನು ಬಂಧಿಸಿದ್ದಾರೆ.