ಬೆಂಗಳೂರು : ಪತ್ನಿ ಮತ್ತು ಆಕೆಯ ಪ್ರಿಯಕರ ಏಕಾಂತದಲ್ಲಿದ್ದ ವಿಡಿಯೋ ಮತ್ತು ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಪತಿಯ ಮೇಲೆ ಪತ್ನಿಯೇ ಎಫ್ ಐಆರ್ ದಾಖಲು ಮಾಡಿದ್ದಾಳೆ.
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಮಂಡ್ಯದ ನಾಗಮಂಗಲ ಮೂಲದ ಪ್ರಸನ್ನ ಮತ್ತು ಸಂತ್ರಸ್ತ ಮಹಿಳೆ 2016. ರಲ್ಲಿ ಮದುವೆಯಾಗಿ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ರು. ಈ ನಡುವೆ ಪತಿ ಪ್ರಸನ್ನ ಪತ್ನಿ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ಲಂತೆ. ಅವರಿಬ್ಬರು ಏಕಾಂತದಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದ್ರು. ಈ ವಿಡಿಯೋ ಮತ್ತು ಫೋಟೋಗಳು ಗಂಡ ಪ್ರಸನ್ನ ಗೆ ಸಿಕ್ಕಿದ್ವು. ಇದಾದ ನಂತರ ಪತಿ ಪ್ರಸನ್ನ ಸ್ನೇಹಿತರು, ಸಂಬಂಧಿಕರಿಗೆ ವಿಡಿಯೋ ಶೇರ್ ಮಾಡ್ತಿನಿ. ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿನಿ ಅಂತಾ ಬೆದರಿಕೆ ಹಾಕ್ತಿದ್ನಂತೆ. ಈ ಹಿನ್ನೆಲೆ ಯಲ್ಲಿ ಪತಿ ವಿರುದ್ಧ ಪತ್ನಿ ಎಫ್ ಐಆರ್ ದಾಖಲಿಸಿದ್ದಾಳೆ.