ನವದೆಹಲಿ: ಯೋಯೋ ಸಿಂಗ್ ಹಾಗೂ ಹನಿ ಸಿಂಗ್ ಎಂದು ಖ್ಯಾತಿ ಹೊಂದಿರುವ ಗಾಯಕ ಹಿರ್ದೇಶ್ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ದೆಹಲಿ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಇತ್ಯರ್ಥವಾಗಿದೆ. ಇಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ವಿಚ್ಛೇದನಕ್ಕಾಗಿ ವ್ಯಾಜ್ಯ ನಡೆಯುತ್ತಿತ್ತು. ಹನಿ ಸಿಂಗ್ ಹಾಗೂ ಆತನ ಕುಟುಂಬದವರು ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಆರ್ಥಿಕವಾಗಿ ಪೀಡಿಸಿದ್ದಾರೆ. ಹೀಗಾಗಿ 2022ರಲ್ಲಿ ಹನಿ ಸಿಂಗ್ನಿಂದ ವಿಚ್ಛೇದನ ಪಡೆಯಬೇಕೆಂದು ನಾನು ನಿರ್ಧರಿಸಿದೆ ಎಂದು ಶಾಲಿನಿ ತಲ್ವಾರ್ ಹೇಳಿದ್ದಾರೆ. ಇನ್ನು ಶಾಲಿನಿ ತಲ್ವಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗಾಯಕ ಹನಿ ಸಿಂಗ್, ತಮ್ಮ ಮೇಲೆ ಶಾಲಿನಿ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ವಯಸ್ಸಾದ ನನ್ನ ತಂದೆ-ತಾಯಿ ಮೇಲೆ ಶಾಲಿನಿ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದು ಅವರ ಸಿನಿಕತನ. ಮಾನಹಾನಿಕರ ರೀತಿಯಲ್ಲಿ ಅವರು ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.