ಪತ್ರಕರ್ತೆಯಿಂದ ಐಪಿಎಸ್‌ ಅಧಿಕಾರಿಯಾದ ಪ್ರೀತಿ ಚಂದ್ರ ಅವರ ಯಶೋಗಾಥೆ

ರಾಜಸ್ಥಾನ: ಸಾಧನೆ ಎಂಬುದು ಸುಲಭದ ಮಾತಲ್ಲ. ಸಾಧನೆಯ ಹಾದಿಯಲ್ಲಿ ಸಾವಿರ ಹಿನ್ನಡೆ, ಮುನ್ನಡೆಗಳು ಎದುರಾಗುತ್ತಿರುತ್ತವೆ. ಆದರೆ ತಮ್ಮ ಎದುರಿಗಿದ್ದ ಸವಾಲನ್ನು ಸಾಧಿಸಲೇಬೇಕೆಂಬ ಛಲದೊಂದಿಗೆ ಸಾಧನೆಯ ಪಥದಲ್ಲಿ ಸಾಗಿದರೆ ಗುರಿಮುಟ್ಟ ಬಹುದು ಎಂಬುವುದಕ್ಕೆ ಈ ದಿಟ್ಟ ಮಹಿಳೆಯೇ ಪ್ರೀತಿ ಚಂದ್ರವರೇ ಸಾಕ್ಷಿ. ಪತ್ರಕರ್ತೆಯಾಗುವ ಆಕಾಂಕ್ಷೆಯಿಂದ ಆರಂಭವಾದ ಪ್ರೀತಿ ಚಂದ್ರ ವೃತ್ತಿ ಜೀವನದ ಪಯಣದಲ್ಲಿ ತಿರುವು ಪಡೆದುಕೊಂಡು ಐಪಿಎಸ್ ಅಧಿಕಾರಿಯಾಗುವ ಗುರಿಯನ್ನು ಸಾಧಿಸಲು ಕಾರಣವಾಯಿತು. ಯಶಸ್ಸಿನ ಹಾದಿಯಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಪ್ರೀತಿ ಚಂದ್ರ ಅವರ ಯಶೋಗಾಥೆ.

ಮೂಲತಃ ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಪ್ರೀತಿ ಚಂದ್ರ ಪತ್ರಕರ್ತೆಯಾಗಿ ಕೆಲಸ ಮಾಡಿದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುವ ಸವಾಲಿನ ಪ್ರಯಾಣವನ್ನು ಪ್ರಾರಂಭಿಸಿದ ಅವರು ಛಲ ಮತ್ತು ಮುನ್ನುಗ್ಗುವ ಆಕೆಯ ಗುಣದಿಂದ ಇಂದು ಗೌರವಿತ್ತ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.

ಮೊದಲು ಆಳ್ವಾರ್‌ನಲ್ಲಿ ಎಎಸ್‌ಪಿಯಾಗಿ ಸೇವೆ ಸಲ್ಲಿದ ಚಂದ್ರ ಬಳಿಕ ಬಂಡಿಯಲ್ಲಿ ಎಸ್‌ಪಿಯಾಗಿ, ಕೋಟಾದಲ್ಲಿ ಎಸಿಬಿಯಲ್ಲಿ ಎಸ್‌ಪಿಯಾಗಿ ಮತ್ತು ಇತರ ನಿರ್ಣಾಯಕ ಸೇವೆ ಸಲ್ಲಿಸುವ ಮೂಲಕ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅಲ್ಲದೇ ಇತರರಿಗೆ ಇವರ ಪಯಣ ಸ್ಪೂರ್ತಿದಾಯಕವಾಗಿದೆ.

Advertisement

1979 ರಲ್ಲಿ ರಾಜಸ್ಥಾನದ ಸಿಕಾರ್‌ನ ಕುಂದನ್ ಗ್ರಾಮದಲ್ಲಿ ಜನಿಸಿದ ಪ್ರೀತಿ ಚಂದ್ರ ಅವರ ಪ್ರಯಾಣವು ಸಮರ್ಪಣಾ ಮನೋಭಾವ ಮತ್ತು ಪರಿಶ್ರಮದಿಂದ ಕೂಡಿದೆ. ಚಂದ್ರ ಅವರ ಶಿಕ್ಷಣವು ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾಯಿತು. ಬಳಿಕ ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಮುಂದುವರೆಯಿತು.

ತರಬೇತಿಯ ಅನುಪಸ್ಥಿತಿಯಿಂದ ಹಿಂಜರಿಯದೆ, ಅವರು ಜೈಪುರದಲ್ಲಿ ಯುಪಿಎಸ್‌ಸಿ ತಯಾರಿಯನ್ನು ಕೈಗೊಂಡರು ಮತ್ತು 2008 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 255 ರ ಪ್ರಭಾವಶಾಲಿ ಶ್ರೇಣಿಯನ್ನು ಗಳಿಸಿದ ಹೆಮ್ಮೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement