ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಜೂನ್ 14ರಿಂದ ಅಪ್ಲೈ ಮಾಡಬೇಕಿದ್ದು ಕೊನೆಯ ದಿನಾಂಕ ಜೂನ್ 24. ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಶ್ವ ವಿದ್ಯಾನಿಲಯ
ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್.ಸಿ/ಬಿ.ವಿ.ಎಸ್.ಸಿ ಆ್ಯಂಡ್ ಎಎಚ್ ಪದವಿ ಪಡೆದಿರಬೇಕು.
ವಯೋಮಿತಿ 18- 35, ಮಾಸಿಕ ವೇತನ 52,640 ರೂ. ಹೆಚ್ಚಿನ ಮಾಹಿತಿಗೆ https://ahvs.karnataka.gov.in/storage/pdf-files NOcontractNotification.pdf