ಬೆಂಗಳೂರು : ಮಂಡ್ಯ ಜಿಲ್ಲೆಯ ಪಾಂಡವಪುರದ RSS ಕಚೇರಿಗೆ ಪಾಂಡವಪುರದ RSS ಕಚೇರಿಗೆ ಪೋಲಿಸರು ನುಗ್ಗಿದ ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಕ್ರಮ, ಹಿಂದೂ ಸಮಾಜವನ್ನು ಪ್ರಚೋದಿಸುವ ನಡವಳಿಕೆ ಇದು ಸರ್ಕಾರ ಈ ಕೂಡಲೇ ಘಟನೆಯ ಕುರಿತು ಕ್ಷಮೆಯಾಚಸಬೇಕು ಹಾಗೇ ಪೊಲೀಸ್ ದರ್ಪ ಮೆರೆದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಿ ಎಂದು ಆಗ್ರಹಿಸಿದ್ದಾರೆ.
ಮೊನ್ನೆ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆ ಸೃಷ್ಠಿಸಿದ ದುಗುಡದ ವಾತಾವರಣ ಇನ್ನೂ ಸಹಜ ಸ್ಥಿತಿಯತ್ತ ಮರಳುತ್ತಿಲ್ಲ ಈ ನಡುವೆ ಬೆಂಕಿಗೆ ತುಪ್ಪ ಸುರಿದಂತೆ ಪೋಲಿಸರು ನಿನ್ನೆ ರಾತ್ರಿ ಪಾಂಡವಪುರದ ಆರ್.ಎಸ್.ಎಸ್ ಕಚೇರಿಗೆ ನುಗ್ಗಿ ಅನುಚಿತ ವರ್ತನೆ ತೋರಿದ್ದಾರೆ, ಪೊಲೀಸರ ಮೂಲಕ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುವ ದಾಟಿಯಲ್ಲಿ ವರ್ತಿಸುತ್ತಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೋ ಅಥವಾ ಹಿಂದೂ ಮನಸ್ಥಿತಿಯ ವಿರೋಧಿ ಸರ್ಕಾರದ ನೆರಳಿನಲ್ಲಿದ್ದೇವೆಯೋ ಎಂಬ ಆತಂಕ ಹಿಂದೂ ಸಮಾಜವನ್ನು ಕಾಡುತ್ತಿದೆ.
ನೈಜ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಭಾರತೀಯ ಸಮಾಜ ಕಟ್ಟುವ ಉದಾತ್ತ ಉದ್ದೇಶದಿಂದ ಜನ್ಮತಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿರ್ಬಂಧಿಸಲು ಕಾಂಗ್ರೆಸ್ ನೆಹರು ಕಾಲದಿಂದಲೂ ಯತ್ನಿಸುತ್ತಲೇ ಇದೆ ಆದರೆ ಸಮರ್ಪಣೆಯ ಬದ್ಧತೆ, ತ್ಯಾಗದ ಪರಿಪೂರ್ಣತೆಯನ್ನು ಮೈಗೂಡಿಸಿಕೊಂಡಿರುವ ಕೋಟ್ಯಾಂತರ ಸ್ವಯಂಸೇವಕರ ಮಹಾಪಡೆಯನ್ನು ಹೊಂದಿರುವ RSS, ದಬ್ಬಾಳಿಕೆ ಎದುರಾದಷ್ಟು ಹೆಮ್ಮರವಾಗಿ ಬೆಳೆಯುತ್ತಲೇ ಇರುತ್ತದೆ, ಇದನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅರಿತು ನಡೆದರೆ ಒಳಿತು ಎಂದಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ