ಇಸ್ಲಾಮಾಬಾದ್: ಇರಾನ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತಿಕಾರವಾಗಿ ಇದೀಗ ಇರಾನ್ ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಸಂಘಟನೆಯ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
‘ಜೈಶ್ ಅಲ್ ಅದ್ಲ್‘ ಪಾಕಿಸ್ತಾನದ ಬಲೂಚಿಯಲ್ಲಿ ನೆಲೆಯುರಿರುವ ಒಂದು ಉಗ್ರಗಾಮಿ ಸಂಘಟನೆಯಾಗಿದ್ದು, 2012ರಲ್ಲಿ ಸ್ಠಾಪನೆಗೊಂಡಿತ್ತು. ಜೈಶ್ ಅಲ್ ಅದ್ಲ್ ಉಗ್ರಗಾಮಿ ಗುಂಪನ್ನು ಹೆಡೆಮುರಿ ಕಟ್ಟಲು ಇರಾನ್ ಪ್ರಯತ್ನಿಸಿದ್ದು, ಉಗ್ರಗಾಮಿ ಗುಂಪಿನೊಡನೆ ಗಡಿಯಲ್ಲಿ ಯುದ್ಧ ಸಾರಿತ್ತು. ಉಗ್ರ ನೆಲೆಗಳನ್ನು ನಾಶ ಮಾಡಲು ಇರಾನ್‌ಗೆ ಕ್ಷಿಪಣಿ ದಾಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ. ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನ ತಿಳಿಸಿದೆ.
ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಿದೆ ಎಂದು ಇರಾನ್ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿತ್ತು.
ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಬಲವಾಗಿ ಖಂಡಿಸಿದೆ. ವಾಯುನೆಲೆಯ ನಿಯಮಗಳನ್ನು ಉಲ್ಲಂಘಿಸಿ ಇರಾನ್ ದಾಳಿ ನಡೆಸಿದ್ದು, ಇಂತಹ ಕ್ರಮಗಳು ಉಭಯ ದೇಶಗಳ ನಡುವೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದೆ.