ನವದೆಹಲಿ: ಪಹಲ್ಗಾಮ್ನಲ್ಲಿ ಇಸ್ಲಾಮಿಕ್ ಉಗ್ರರು ನಡೆಸಿದ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂದೂರ್ ನಡೆಸಿ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆಬಡಿದಿತ್ತು.
ಇದರ ಬೆನ್ನಲ್ಲೇ ಪುನಃ ಭಾರತದ ಹಲವು ನಗರಗಳ ಮೇಲೆ ದಾಳಿಗೆ ವಿಫಲ ಯತ್ನ ಮಾಡಿತ್ತು. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದ ಮೇಲೆ ಭಾರತ ದಾಳಿ ಮುಂದುವರಿಸಿದ್ದು ಇದೀಗ ಜಮ್ಮು ಕಾಶ್ಮೀರದ ಪಠಾಣ್ ಕೋಟ್ ನಲ್ಲಿ ಪಾಕಿಸ್ತಾನದ JF-17 ಜೆಟ್ ವಿಮಾನವನ್ನು ಭಾರತದ ಆಕಾಶ್ ಮಿಸೈಲ್ ಧ್ವಂಸಗೊಳಿಸಿದೆ. ಹೌದು ಪಠಾಣ್ ಕೋಟ್ ನಲ್ಲಿ ಪಾಕಿಸ್ತಾನ JF-17 ಜೆಟ್ ದ್ವಂಸ ಜೆ ಎಫ್ ಸೆವೆನ್ ಧ್ವಂಸಗೊಳಿಸಿದೆ. ಸ್ವದೇಶಿ ನಿರ್ಮಿತ ಭಾರತದ ಆಕಾಶ್ ಮಿಸೈಲ್ ಪಾಕಿಸ್ತಾನದ ಗೆಟ್ ವಿಮಾನವನ್ನು ಇದೀಗ ಹೊಡೆದುರುಳಿಸಿದೆ. ಇಷ್ಟಾದರೂ ಕೂಡ ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ದಾಳಿ ಮಾಡುತ್ತಾರೆ ಆದರೂ ಕೂಡ ಭಾರತ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
