ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ವಾರ್ಷಿಕವಾಗಿ 6000 ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಈಗಾಗಲೇ 16 ಕಂತಿನ 2000 ಹಣ ಬಿಡುಗಡೆ ಆಗಿದೆ. ಈಗ ಮುಂದಿನ ಸರದಿ 17ನೇ ಕಂತು. ಈ ಕಂತಿನ ಹಣ ಪಡೆಯಲು ನೀವು, ಇ-ಕೆವೈಸಿ ಮತ್ತು ಭೂ ಪರಿಶೀಲನೆ ಎರಡನ್ನೂ ಮಾಡಬೇಕು.
ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ, ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ pmkisan.gov.in ಅಥವಾ ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಮಾಡಬಹುದು.