ಇಸ್ಲಾಮಾಬಾದ್: ಬಿಜೆಪಿ ಗೆದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗು ವುದು ಎಂಬ ಬಿಜೆಪಿ ಭರವಸೆಗಳ ನಡುವೆಯೇ ಆಜಾದ್ ಕಾಶ್ಮೀರ (ಪಿಒಕೆಯನ್ನು ಪಾಕಿಸ್ತಾನ ಕರೆಯುವುದು), ವಿದೇಶಿ ಸರಹದ್ದು ಎಂದು ಪಾಕಿ ಸ್ತಾನ ಸರ್ಕಾರ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅಚ್ಚರಿಯ ಮಾಹಿತಿ ಸಲ್ಲಿಸಿದೆ.
ಪಿಒಕೆ ತನ್ನ ಭಾಗವಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿರುವುದು ಭಾರತಕ್ಕೆ ಸಂತಸದ ಸುದ್ದಿ. ಈ ಘಟನೆಯಿಂದ ಪಾಕಿಸ್ತಾನದ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. ಸರ್ಕಾರಿ ವಕೀಲರೊಬ್ಬರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಆಘಾತಕಾರಿ ಹೇಳಿಕೆಯನ್ನು ನೀಡಿದ್ದು, ಪಿಒಕೆ ವಿದೇಶಿ ಪ್ರದೇಶವಾಗಿದೆ ಎಂದು ಹೇಳಿದ್ದಾರೆ. ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಪಿಒಕೆಯಿಂದ ಎರಡು ವಾರಗಳಿಂದ ನಾಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಬಳಿಕ ಆತ ಪೊಲೀಸರ ವಶದಲ್ಲಿರುವ ವಿಚಾರ ಬೆಳಕಿಗೆ ಬಂದಿದೆ.
ಕಾಶ್ಮೀರಿ ಕವಿ ಆಹ್ಮದ್ ಫರ್ಹಾದ್ ಶಾ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್, ‘ಆಜಾದ್ ಕಾಶ್ಮೀರದಲ್ಲಿ ಅಹ್ಮದ್ ಶಾ ಇರುವ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ. ಅದು ವಿದೇಶಿ ಸರಹದ್ದು. ಅಲ್ಲಿಗೆ ಪ್ರತ್ಯೇಕ ಸಂವಿಧಾನ, ನ್ಯಾಯಾಲಯಗಳಿವೆ ಎಂದರು, ಈ ವೇಳೆ ನ್ಯಾಯಾಧೀಶರು ‘ಅದು ವಿದೇಶಿ ನೆಲವೆಂದಾದಲ್ಲಿ ಪಾಕಿಸ್ತಾನ ಸೇನೆ ಆ ಪ್ರದೇಶಕ್ಕೆ ಪ್ರವೇಶ ಮಾಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.