ದಾವಣಗೆರೆ; ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರ ಕುಶಲಕರ್ಮಿಗಳಿಗೆ ಭಾರತ ಸರ್ಕಾರದ ಹೊಸ ಯೋಜನೆ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಯನ್ನು ಪಡೆಯಲು ಬಡಗಿತನ, ದೋಬಿ, ಕುಲುಮೆ, ಬೀಗ ಮಾಡುವವರು. ಶಿಲ್ಪಿಗಾರರು, ಅಕ್ಕಸಾಲಿಗರು, ಕುಂಬಾರ, ಚಮ್ಮಾರ, ತರಗಾರರು, ಗೊಂಬೆ, ಆಟಿಕೆ ತಯಾರಿಕೆ, ಕ್ಷೌರಿಕ, ಹೂಮಾಲೆ ತಯಾರಕರು, ಬುಟ್ಟಿ, ಚಾಪೆ ಮತ್ತು ಕಸಬರಿಗೆ ತಯಾರಕರು, ಕಲ್ಲುಕುಟಿಗರು, ಟೈಲರ್, ಮೀನು ಬಲೆ ತಯಾರಕರು ಹಾಗೂ ದೋಣಿ ತಯಾರಿಕಾ ಕುಶಲಕರ್ಮಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಇಲಾಖಾ ವೆಬ್ಸೈಟ್ https://pmvishwakarma.gov.in ಮೂಲಕ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ರಾಜೇಂದ್ರ ನಾಮದೇವ ಕದಂ ತಿಳಿಸಿದ್ದಾರೆ.