ಚಿತ್ರದುರ್ಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಮ, ನಗರ ಮಟ್ಟದಲ್ಲಿನ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರ ಕುಶಲಕರ್ಮಿಗಳಿಗೆ ಪಿ.ಎಂ. ವಿಶ್ವಕರ್ಮ ಯೋಜನೆಯ ಸೌಲಭ್ಯಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬಡಿಗ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಗ ವೃತ್ತಿ ಮಾಡುವವರು, ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು(ಸಾಂಪ್ರದಾಯಿಕ), ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಅಗಸರು (ದೋಬಿ), ಆಭರಣ ತಯಾರಕರು, ಸಿಂಪಿಗ ದರ್ಜಿ (ಬಟ್ಟೆ ಹೊಲೆಯುವವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ(ಮೂರ್ತಿ ಮತ್ತು ಕಲ್ಲಿನ ಕೆತ್ತನೆ), ಚಮ್ಮಾರ (ಪಾದರಕ್ಷೆ ತಯಾರಕರು), ಬೀಗ ತಯಾರಿಕ ಕುಶಲಕರ್ಮಿಗಳು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಗಾಗಿ ನೊಂದಾಯಿಸಿಕೊಳ್ಳಲು ಆಧಾರ್ ಕಾರ್ಡ್, ಪಾನ್ ಕಾರ್ಡ್ (ಕಡ್ಡಾಯವಲ್ಲ), ರೇಷನ್ ಕಾರ್ಡ್ (ಕಡ್ಡಾಯವಲ್ಲ), ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್ ದಾಖಲೆಯೊಂದಿಗೆ ಖುದ್ದಾಗಿ ಫಲಾನುಭವಿಯೇ ಕೇಂದ್ರಕ್ಕೆ ತೆರಳಿ ನೊಂದಣಿ ಮಾಡಿಸಬೇಕು.
ಜಿಲ್ಲೆಯಲ್ಲಿ ಮೇಲೆ ತಿಳಿಸಿದ ವೃತ್ತಿ ಕೈಗೊಳ್ಳುತ್ತಿರುವವರು ಯೋಜನೆಗಾಗಿ https://pmvishwakarma.gov.in ವೆಬ್‍ಸೈಟ್ ನಲ್ಲಿ ನೊಂದಾಯಿಸಿಕೊಳ್ಳಬೇಕು. ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳ, ಸಿ.ಎಸ್.ಸಿ. ಕೇಂದ್ರಗಳ ಮೂಲಕ ಯೋಜನೆಗೆ ನೋಂದಾಯಿಸಿಕೊಂಡು ಜಿಲ್ಲೆಯ ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.