ಒಂದು ಲೋಟ ಅಕ್ಕಿ, ಬೆಲ್ಲ – ಒಂದು ಲೋಟ, ಅರ್ಧ ಹೋಳು ತೆಂಗಿನ ಕಾಯಿ ತುರಿ, ಅರ್ಧ ಪಚ್ಚ ಬಾಳೆಹಣ್ಣು, ಕರಿಯಲು ಎಣ್ಣೆ ಇಷ್ಟಿದ್ದರೆ ಎರೆಯಪ್ಪ ಮಾಡಿಬಿಡಬಹುದು. ಅಕ್ಕಿಯನ್ನು ಹಿಂದಿನ ರಾತ್ರಿಯೇ ನೆನೆಸಿಡಿ.
ಮಿಕ್ಸಿ ಜಾರಿಗೆ ಅಕ್ಕಿ ಹಾಗೂ ಬೆಲ್ಲ ಹಾಕಿ ಮೊದಲು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಕಾಯಿ ತುರಿ ಹಾಗೂ ಬಾಳೆಹಣ್ಣು ಹಾಕಿ ಮತ್ತೆ ಇಡ್ಲಿ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಏಲಕ್ಕಿಯನ್ನು ಸಹಾ ನೀವು ಪುಡಿ ಮಾಡಿ ಹಾಕಬಹುದು.
ಬಾಣಲೆಯಲ್ಲಿ ಎಣ್ಣೆ ಕಾಯಲು ಬಿಡಿ, ಮಂದ ಉರಿ ಇರಲಿ. ಅಕ್ಕಿ ಬೆಲ್ಲ ರುಬ್ಬಿದ ಮಿಶ್ರಣವನ್ನು ಈಗ ಸೌಟಿನಲ್ಲಿ ಬಾಣಲೆಯ ಮಧ್ಯ ಭಾಗಕ್ಕೆ ಎರೆಯಿರಿ. ನೆನಪಿರಲಿ, ಒಮ್ಮೆ ಒಂದು ಸೌಟು ಹಿಟ್ಟನ್ನಷ್ಟೇ ಹಾಕಬೇಕು.
ಒಮ್ಮೆಲೆ ಎರಡು ಮೂರು ಹಿಟ್ಟು ಸುರಿಯುವ ಹಾಗಿಲ್ಲ. ಎರಡು ಬದಿ ಕೆಂಪಗೆ ಆಗುವವರೆಗೂ ಹದವಾಗಿ ಬೇಯಿಸಿ. ಮೃದುವಾದ, ಸಿಹಿಯಾದ ಎರೆಯಪ್ಪ ಪೂಜೆಗೆ ನೈವೇದ್ಯ ಮಾಡಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.