ಚಿತ್ರದುರ್ಗ : ಪೆಹಲ್ಗಾಮ್ನಲ್ಲಿ ಘಟನೆ ನಡೆದ ವೇಳೆ ಒಬ್ಬರೂ ಪೊಲೀಸ್ ಇರಲಿಲ್ಲ ಬಿಜೆಪಿಯವರ ಅಕ್ಕ ತಂಗಿಯರಿಗೆ ಅದೇ ಗತಿ ಆಗಿದ್ದರೆ? ಸಾವು ಆದ್ಮೇಲೆ ಬಿಜೆಪಿಯವರು ಸಂಭ್ರಮಿಸುತ್ತಾರೆ ಇನ್ಮೇಲೆ ಹಿಂದೆ ಮುಂದೆ ನೋಡದೆ ಖಂಡನೆ ಮಾಡಬೇಕು ಬಿಜೆಪಿಯವರಿಗೆ ಸಾವಲ್ಲಿ ಸಂಭ್ರಮ ಇದೆಲ್ಲಾ ನೀಚಬುದ್ಧಿ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮ ದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಧರ್ಮಸ್ಥಳ ಪ್ರಕರಣದ ಬಗ್ಗೆ ನಾನು ಪ್ರಯಿಕ್ರಿಯಿಸಲ್ಲ ಕಾನೂನು ಬೇಗ ತೀರ್ಮಾನ ಮಾಡಿ ಪ್ರಕರಣ ಇತ್ಯರ್ಥ ಆಗಲಿ ಧರ್ಮಸ್ಥಳ, ವಿರೇಂದ್ರ ಹೆಗ್ಗಡೆ ಅವರ ಮೇಲೆ ಗೌರವವಿದೆ ಎಂದ ಸಚಿವರು ಬಿಜೆಪಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ವಿಚಾರ ಆಪರೇಷನ್ ಸಿಂದೂರ್ನಲ್ಲಿ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ ಯಾಕೆ ಅನಥರಾದರು ಎಂದು ಬಿಜೆಪಿಯವರು ನೋಡಲಿಸಿಂದೂರ್ ಅಂತ ಹೆಸರಿಟ್ಟು ಎಲ್ಲಾ ಸಾವು ಆದ್ಮೇಲೆ ಬಂದು ಭಾಷಣ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಎಲ್ಲಾ ಆದ ಬಳಿಕ ಬಿಜೆಪಿಯವರು ಭಾಷಣ ಮಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಯಾಕೆ ಪ್ರಕರಣ ನಡೆಯಿತೆಂದು ಯಾವನಾದ್ರೂ ಬಿಜೆಪಿಯವನು ಮಾತಾಡಿದ್ದಾನಾ ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದೆಯಾ ಎಂದು ಸಚಿವ ಮಧು ಬಂಗಾರಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದರು.