ಪೈನಾಪಲ್ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ

ಅನಾನಸು ಹಣ್ಣು ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಆ್ಯಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ.

ಇದು ಆ್ಯಂಟಿ ಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್‌ ಆ್ಯಸಿಡ್‌ಗಳನ್ನು ಹೊಂದಿದೆ ಅನನ್ಯ ಬಣ್ಣ, ಆಕಾರ ಮತ್ತು ಮುಳ್ಳಿನ ಎಲೆಗಳಿಂದಾಗಿ ಅನೇಕ ವಿಧದ ಫಲಗಳ ನಡುವೆಯೂ ಗುರುತಿಸಿ ಕೊಳ್ಳುವಂತಹ ಹಣ್ಣು ಅನಾನಸ್.

ರೋಮಾಂಚಕ ಹಳದಿ ವರ್ಣ ಮತ್ತು ಮಧುರವಾದ ಪರಿಮಳದಿಂದಾಗಿ ಇದು ಸಾಕಷ್ಟು ಆಕರ್ಷಣೀಯವಾಗಿದೆ. ಹುಳಿ ಮಿಶ್ರಿತ ಸಿಹಿ ಇರುವ ಈ ಹಣ್ಣಿನಿಂದ ಜ್ಯೂಸ್ ಸಲಾಡ್ ಮತ್ತು ಇತರ ತಿನಿಸುಗಳನ್ನು ತಯಾರಿಸುವರು.

Advertisement

ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಕೆಲವು ವೈದ್ಯಕೀಯ ಚಿಕಿತ್ಸೆಗಳಿಗಾಗಿಯೂ ಅನಾನಸನ್ನು ಬಳಸಲಾಗುತ್ತದೆ. ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ. ದೇಹದ ಪ್ರತಿರೋಧವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ.

ಆದ್ದರಿಂದ ಅದರ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

1) ರೋಗ ನಿರೋಧಕ ಶಕ್ತಿ ಹೆಚ್ಚಳ: ಅನಾನಸು ಹಣ್ಣು ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಆ್ಯಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ. ಇದು ಆ್ಯಂಟಿ ಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್‌ ಆ್ಯಸಿಡ್‌ಗಳನ್ನು ಹೊಂದಿದೆ. ಅನಾನಸು ದೀರ್ಘಾವದಿಯ ಪರಿಣಾಮ ನಿವಾರಿಸುತ್ತದೆ. ಇದರಲ್ಲಿರುವ ರೋಗ ನಿರೋಧಕ ಗುಣಗಳು ಡಯಾಬಿಟೀಸ್‌ ಮತ್ತು ಹೃದಯ ಸಂಬಂಧಿ ರೋಗಗಳನ್ನು ಸಾಧ್ಯತೆ ಕಡಿಮೆ ಮಾಡುತ್ತದೆ.

2) ಕಣ್ಣಿನ ಆರೋಗ್ಯಕ್ಕೆ ಸಹಕಾರಿ: ವಿಟಮಿನ್‌ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗ‌ಳಾದ ಪೋಟ್ಯಾಸಿಯಂ ಮತ್ತು ಮ್ಯಾಂಗನೀಸ್‌ಗಳಿಂದ ಅನಾನಸು ಶ್ರೀಮಂತವಾಗಿದೆ. ಇದರಲ್ಲಿ ಜೀವಕೋಶಗಳು ಡ್ಯಾಮೇಜ್‌ ಆಗುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಅನಾನಸ್‌ ಹಣ್ಣುಗಳು ಕಣ್ಣುಗಳ ಸ್ನಾಯು ಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಹಣ್ಣಿನಲ್ಲಿರುವ ಬೀಟಾ-ಕ್ಯಾರೊಟಿನ್‌ ಅಂಶಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.

3) ಮೂಳೆಗಳನ್ನು ಬಲಪಡಿಸುತ್ತದೆ: ಅನಾನಸ್ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯಮಾಡುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಸತು, ತಾಮ್ರ ಮತ್ತು ಕ್ಯಾಲ್ಸಿಯಂನೊಂದಿಗೆ ಸಂಯೋಜನೆಗೊಂಡಿರುವುದರಿಂದ ದೇಹ ಪೋಷಕಾಂಶಗಳನ್ನು ಸುಲಭವಾಗಿ ಗ್ರಹಿಸುತ್ತದೆ.

4) ಹಲ್ಲುಗಳಿಗೆ ಶಕ್ತಿ ನೀಡುತ್ತದೆ: ಅನಾನಸ್ ಸೇವಿಸುವುದರಿಂದ ನಮ್ಮ ಹಲ್ಲು ಮತ್ತು ಒಸಡುಗಳು ಗಟ್ಟಿಯಾಗುತ್ತವೆ. ನಮ್ಮ ಹಲ್ಲು ಮತ್ತು ಮೂಳೆಗಳು ಕ್ಯಾಲ್ಸಿಯಂನಿಂದ ರೂಪಗೊಂಡಿದೆ. ಅನಾನಸ್‍ನಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.

5) ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ: ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇನ್ನು ರಕ್ತ ಹೆಪ್ಪುಗಟ್ಟದ ಸಮಸ್ಯೆ ಇರುವವರು ಈ ಹಣ್ಣು ತಿನ್ನಲು ಹೋಗಬೇಡಿ.

6) ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ: ಅನಾನಸ್‌ನಲ್ಲಿ ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ತುಂಬಾ ಮಾನಸಿಕ ಒತ್ತಡವಿದ್ದಾಗ ಒಂದು ಬೌಲ್ ಅನಾನಸ್ ತಿನ್ನಿ, ನಿಮ್ಮ ಆಲೋಚನೆಗಳನ್ನು ಹೊರದೂಡಿ, ನಿಮ್ಮನ್ನು ರಿಲ್ಯಾಕ್ಸ್ ಮಾಡುವುದು.

7) ಮೊಡವೆ ನಿವಾರಣೆ ಮಾಡುತ್ತದೆ: ಅನಾನಸ್ ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ, ಇನ್ನು ಇದನ್ನು ಫೇಶಿಯಲ್ ಮಾಸ್ಕ್ ಆಗಿಯೂ ಬಳಸಬಹುದು. ಒಂದು ತುಂಡು ಅನಾನಸ್ ತೆಗೆದುಕೊಂಡು ಅದರ ರಸವನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಕಾಂತಿ ಹೆಚ್ಚುವುದು.

8) ಅಸ್ತಮಾ ತಡೆಗಟ್ಟುತ್ತದೆ: ಅನಾನಸ್‌ನಲ್ಲಿ ಬೀಟಾ ಕೆರೋಟಿನ್ ಇದ್ದು, ಇದು ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೂಳು, ಪೋಷಕಾಂಶ ಕೊರತೆ, ಮಾನಸಿಕ ಒತ್ತಡದಿಂದ ಸಮಸ್ಯೆ ಹೆಚ್ಚಾಗುವುದು, ಅನಾನಸ್‌ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವುದರಿಂದ ಆರೋಗ್ಯ ಹೆಚ್ಚಿಸುತ್ತದೆ.

9) ತಲೆ ಹೊಟ್ಟು ನಿವಾರಿಸುತ್ತದೆ: ಸರಿಯಾದ ಪೋಷಣೆ ಇಲ್ಲದೆ ಮತ್ತು ಹೊರಗಡೆಯ ಮಾಲಿನ್ಯದಿಂದಾಗಿ ಉಂಟಾಗುವ ತಲೆಹೊಟ್ಟನ್ನು ಅನಾನಸಸ್‍ನಲ್ಲಿರುವ ವಿಟಮಿನ್ ಸಿ ಸತ್ವ ನಿವಾರಿಸುತ್ತದೆ. ತಲೆ ಕೂದಲಿನ ಬುಡದಲ್ಲಿರುವ ಬ್ಯಾಕ್ಷೀರಿಯಾಗಳ ವಿರುದ್ಧ ಹೋರಾಡುತ್ತದೆ.

10) ಜೀರ್ಣಕ್ರಿಯೆಗೆ ಸಹಕಾರಿ: ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳನ್ನು ಅನಾನಸ್ ಕಡಿಮೆ ಮಾಡುತ್ತದೆ. ಇದರಲ್ಲಿನ ಫೈಬರ್ ಮತ್ತು ವಿಟಮಿನ್ ಸಿ ಸತ್ವ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ. ಉದರದ ಸಮಸ್ಯೆಗಳನ್ನು ನಿವಾರಿಸುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement