ಯಾರೇ ಆದರೂ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಪಡೆಯಬೇಕು ಎಂದುಕೊಂಡಿದ್ದರೆ ಅದಕ್ಕಾಗಿ ಪೋಸ್ಟ್ ಆಫೀಸ್ ನ ಸ್ಕೀಮ್ ಗಳು (Post Office Scheme) ಒಳ್ಳೆಯ ಆಯ್ಕೆ ಆಗಿದೆ. ಬ್ಯಾಂಕ್ ಹೂಡಿಕೆಯ ಹಾಗೆ ಇಲ್ಲಿ ಕೂಡ ನಿಮಗೆ ಒಳ್ಳೆಯ ಆದಾಯ ಬರುತ್ತದೆ. ಇಂದು ನಾವು ನಿಮಗೆ ಒಂದು ಪೋಸ್ಟ್ ಆಫೀಸ್ ನ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ (Monthly Investment Scheme) ಬಗ್ಗೆ ತಿಳಿಸಲಿದ್ದೇವೆ. ಇದರಲ್ಲಿ ನೀವು ಪ್ರತಿ ತಿಂಗಳು ₹5000 ರೂಪಾಯಿ ಆದಾಯ ಪಡೆಯಬಹುದು. ಈ ಒಂದು ಸ್ಕೀಮ್ ಬಗ್ಗೆ ಪೂರ್ತಿಯಾಗಿ ತಿಳಿಯೋಣ..
ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ಎಂದರೇನು?
ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಲು ಮಿನಿಮಮ್ ಮೊತ್ತ ₹1000 ಆಗಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ 7.4% ಬಡ್ಡಿ ಸಿಗಲಿದ್ದು, ಸಿಂಗಲ್ ಖಾತೆ ಅಥವಾ ಜಂಟಿ ಖಾತೆ ಯಾವುದನ್ನು ಸಹ ತೆರೆಯಬಹುದು. 18 ವರ್ಷ ತುಂಬದೆ ಇರುವವರು ಅಥವಾ ಮಾನಸಿಕ ಸ್ಥಿಮಿತ ಸರಿ ಇಲ್ಲದೇ ಇರುವವರ ಹೆಸರಿನಲ್ಲಿ ಅವರ ತಂದೆ ತಾಯಿ ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.
ಹೂಡಿಕೆ ಮಾಡಬಹುದಾದ ಮೊತ್ತ ಎಷ್ಟು?
ಇದು ಒಂದು ಬಾರಿ ಹೂಡಿಕೆ ಮಾಡುವ ಯೋಜನೆ ಆಗಿದೆ, ಇಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ಸ್ ಬರುತ್ತದೆ ಎಂದು ನೋಡುವುದಾದರೆ.. ಈ ಸ್ಕೀಮ್ ನಲ್ಲಿ ಸಿಂಗಲ್ ಖಾತೆ ಹೊಂದಿರುವವರು ಮ್ಯಾಕ್ಸಿಮಮ್ 9 ಲಕ್ಷ ಇನ್ವೆಸ್ಟ್ ಮಾಡಬಹುದು, ಜಂಟಿ ಖಾತೆ ಹೊಂದಿರುವವರು ಮ್ಯಾಕ್ಸಿಮಮ್ 15 ಲಕ್ಷ ಇನ್ವೆಸ್ಟ್ ಮಾಡಬಹುದು. 5 ವರ್ಷದ ಅವಧಿಗೆ 9 ಲಕ್ಷ ಹೂಡಿಕೆ ಮಾಡಿದರೆ 7.4% ಬಡ್ಡಿದರದಲ್ಲಿ ತಿಂಗಳಿಗೆ ₹5550 ರೂಪಾಯಿ ಪ್ರತಿ ತಿಂಗಳು ಆದಾಯ ಬರುತ್ತದೆ. ಸ್ಕೀಮ್ ಮೆಚ್ಯುರಿಟಿ ಆದ ನಂತರ 9 ಲಕ್ಷವನ್ನು ಕೂಡ ಹಿಂಪಡೆಯಬಹುದು. ಎಲೆಕ್ಟ್ರಾನಿಕ್ಸ್ ಕ್ಲಿಯರೆನ್ಸ್ ಸೇವೆ ಮೂಲಕ ಹಣ ವಾಪಸ್ ಸಿಗುತ್ತದೆ.
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ಶುರು ಮಾಡಿದ 1 ತಿಂಗಳ ಅವಧಿಯಿಂದ ಬಡ್ಡಿ ಪಡೆಯುವುದಕ್ಕೆ ಅರ್ಹತೆ ಪಡೆಯುತ್ತೀರಿ, ಹಾಗೆಯೇ 5 ವರ್ಷದ ಅವಧಿಗಿಂತ ಮೊದಲು ನೀವು ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಮೊದಲೇ ವಾಪಸ್ ಪಡೆಯಬೇಕು ಎಂದರೆ, ಸ್ವಲ್ಪ ಮೊತ್ತವನ್ನು ಕಡಿತಗೊಳಿಸಿ ಕೊಡಲಾಗುತ್ತದೆ.. ಹಾಗೆಯೇ ಈ ಒಂದು ಯೋಜನೆಯಲ್ಲಿ ಬರುವ ಬಡ್ಡಿಗೆ 1961ರ ಸೆಕ್ಷನ್ 80C ನ ಆದಾಯ ತೆರಿಗೆ ಉಪಯೋಗ ಸಿಗುವುದಿಲ್ಲ.
₹5000 ಆದಾಯ ಪಡೆಯಲು ಇಷ್ಟು ಹೂಡಿಕೆ ಮಾಡಿ:
ಈ ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ನಲ್ಲಿ 9 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ₹5550 ರೂಪಾಯಿ ಅದಾಯ ಬರುತ್ತದೆ. ತಿಂಗಳಿಗೆ 5000 ಆದಾಯ ಬರಬೇಕು ಎಂದರೆ, ಈ ಒಂದು ಯೋಜನೆಯಲ್ಲಿ ನೀವು ₹8,11,000 ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ತಿಂಗಳಿಗೆ ₹5,000 ರೂಪಾಯಿಗಳನ್ನು ಆದಾಯವಾಗಿ ಪಡೆಯಬಹುದು.