ಕೇಂದ್ರ ಸರ್ಕಾರ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. CAA ಅನ್ನು ಡಿಸೆಂಬರ್ 2019 ರಲ್ಲಿ ಅಂಗೀಕರಿಸಲಾಯಿತು.
ಅದಕ್ಕೆ ರಾಷ್ಟ್ರಪತಿಯವರ ಒಪ್ಪಿಗೆಯೂ ಸಿಕ್ಕಿತು. ಆದರೆ ಈವರೆಗೆ ನಿಯಮಾವಳಿ ರೂಪಿಸದ ಕಾರಣ ಈ ಕಾನೂನು ಜಾರಿಗೆ ಬಂದಿರಲಿಲ್ಲ. ಇತ್ತೀಚೆಗಷ್ಟೇ ಕೇಂದ್ರವು ಇದನ್ನು ಜಾರಿಗೊಳಿಸುವ ಘೋಷಣೆ ಮಾಡಿತ್ತು.
ಇದೀಗ ಅಧಿಸೂಚನೆ ಪ್ರಕಟ ಮಾಡಿದೆ. ಈ ಕಾಯ್ದೆಯಡಿ ಮಸ್ಲಿಂಮೇತರ ಧರ್ಮಗಳ ನಿರಾಶ್ರಿತರಿಗೆ ಪೌರತ್ವ ನೀಡಲಾಗುತ್ತದೆ.