ಹಾಸನ:ನನ್ನ ಬದ್ಧತೆಗಳಿಂದಾಗಿ ನಾನು ಇಲ್ಲಿಯವರೆಗೆ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಲ್ಲ. ಪ್ರಚಾರಕ್ಕೆ ನನಗೆ ಯಾವುದೇ ನಿರ್ದಿಷ್ಟ ಆಹ್ವಾನ ಬಂದಿಲ್ಲ” ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುವ ಬಗ್ಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಮುಂದೆ ನೋಡೋಣ ಎಂಬುವುದಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ ತಮ್ಮ ಬಿಡುವಿಲ್ಲದ ಸಮಯದ ಕುರಿತಾಗಿಯೂ ತಿಳಿಸಿ ಹೇಳಿಕೆ ನೀಡಿದ್ದಾರೆ.
ಹಾಸನಾಂಬೆ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ನಾನು ವಿವಿಧ ಕ್ಷೇತ್ರಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ, ಚನ್ನಪಟ್ಟಣ ಚುನಾವಣೆಯ ಬಗ್ಗೆ ನನ್ನ ಬಳಿ ಯಾವುದೇ ವಿವರಗಳಿಲ್ಲ, ಆದ್ದರಿಂದ ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ನೋಡೋಣ. ಎಂದು ಮುಗುಳ್ನಗುತ್ತಾ ದೇವಸ್ಥಾನದಿಂದ ಹೊರಡುವ ಮುನ್ನ ಶುಭ ಹಾರೈಕೆಗಳೊಂದಿಗೆ ಮಾತು ಮುಗಿಸಿದರು.